BIG 3: ಗದಗ ಹುಲ್ಲೂರು ಪಿಯು ಕಾಲೇಜು ಎತ್ತಂಗಡಿ ಇಲ್ಲ, ಸಿ ಸಿ ಪಾಟೀಲ್ ಭರವಸೆ

ಗದಗ ರೋಣ ತಾಲೂಕಿನ ಹುಲ್ಲೂರು ಗ್ರಾಮದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಡಿಮೆ ದಾಖಲಾತಿ ಇದೆ ಎಂದು ಎತ್ತಂಗಡಿ ಮಾಡಲು ಸಿದ್ಧತೆ ನಡೆದಿದೆ. ಈ ಕಾಲೇಜನ್ನು ಧಾರವಾಡದ ಅಳ್ನಾವರಕ್ಕೆ ಸ್ಥಳಾಂತರಿಸುವಂತೆ ಸರ್ಕಾರ ಆದೇಶ ನೀಡಿದೆ. ಈ ಆದೇಶದ ಬೆನ್ನಲ್ಲೇ ವಿದ್ಯಾರ್ಥಿಗಳು, ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. 

First Published Jun 29, 2022, 3:22 PM IST | Last Updated Jun 29, 2022, 3:22 PM IST

ಗದಗ (ಜೂ. 29): ಇಲ್ಲಿನ ರೋಣ ತಾಲೂಕಿನ ಹುಲ್ಲೂರು ಗ್ರಾಮದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಡಿಮೆ ದಾಖಲಾತಿ ಇದೆ ಎಂದು ಎತ್ತಂಗಡಿ ಮಾಡಲು ಸಿದ್ಧತೆ ನಡೆದಿದೆ. ಈ ಕಾಲೇಜನ್ನು ಧಾರವಾಡದ ಅಳ್ನಾವರಕ್ಕೆ ಸ್ಥಳಾಂತರಿಸುವಂತೆ ಸರ್ಕಾರ ಆದೇಶ ನೀಡಿದೆ. ಈ ಆದೇಶದ ಬೆನ್ನಲ್ಲೇ ವಿದ್ಯಾರ್ಥಿಗಳು, ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. 'ಈ ಕಾಲೇಜು ಸ್ಥಳಾಂತರವಾದರೆ ನಾವು ಬೇರೆ ಕಡೆ ಕಳುಹಿಸಿ ಓದಿಸುವಷ್ಟು ಅನುಕೂಲವಾಗಿಲ್ಲ. ನಮ್ಮ ಮಕ್ಕಳು ಇಲ್ಲಿಯೇ ಒದುವಂತೆ ಅವಕಾಶ ಮಾಡಿಕೊಡಿ' ಎಂದು ಪೋಷಕರು ಒತ್ತಾಯಪಡಿಸಿದ್ದಾರೆ. 

2003 ರಲ್ಲಿ ಈ ಸರ್ಕಾರಿ ಪಿಯು ಕಾಲೇಜನ್ನು ಕಟ್ಟಲಾಗಿದೆ. 2018 ರಲ್ಲಿ ಸುಸಜ್ಜಿತ ಕಟ್ಟಡ ಕಟ್ಟಲಾಗಿದೆ. ಸದ್ಯ 28 ವಿದ್ಯಾರ್ಥಿಗಳು ದಾಖಲಾತಿ ಮಾಡಿಕೊಂಡಿದ್ದಾರೆ. ರೋಣದಿಂದ 10 ಕಿಮೀ ದೂರದಲ್ಲಿದೆ. ಈ ಬಗ್ಗೆ ಬಿಗ್ 3 ಬಹಳ ಕಳಕಳಿಯಿಂದ ವರದಿ ಪ್ರಸಾರ ಮಾಡಿತು. ವರದಿ ಬಳಿಕ ನರಗುಂದ ಶಾಸಕ ಸಿ ಸಿ ಪಾಟೀಲ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ಯಾವುದೇ ಕಾರಣಕ್ಕೂ ಕಾಲೇಜು ಸ್ಥಳಾಂತರಕ್ಕೆ ಅವಕಾಶ ಕೊಡುವುದಿಲ್ಲ. ಉಳಿಸಿಕೊಳ್ಳಲು ಪ್ರಯತ್ನಪಡುತ್ತೇವೆ' ಎಂದು ಭರವಸೆ ನೀಡಿದರು. ಶಾಸಕರ ಭರವಸೆಯ ಮಾತುಗಳಿಂದ ವಿದ್ಯಾರ್ಥಿಗಳು, ಪೋಷಕರಲ್ಲಿ ಸಂಭ್ರಮ ಮನೆ ಮಾಡಿದೆ. 

Video Top Stories