ಶಾಲೆ ರೀ ಓಪನ್ ಯಾವಾಗ? ನಿರ್ಧಾರದ ಬಗ್ಗೆ ಸುರೇಶ್ ಕುಮಾರ್ ಹೇಳಿದ್ದಿದು

ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶಾಲೆ ಪುನಾರಂಭದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈಗಲೇ ಶಾಲೆ ಪ್ರಾರಂಭ ಮಾಡುವುದು ಬೇಡ ಎಂದು ಸಾರ್ವಜನಿಕ ವಲಯದಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪೋಷಕರು ವಿರೋಧಿಸುತ್ತಿದ್ದಾರೆ. 

First Published Oct 8, 2020, 11:55 AM IST | Last Updated Oct 8, 2020, 11:55 AM IST

ಬೆಂಗಳೂರು (ಅ. 08): ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶಾಲೆ ಪುನಾರಂಭದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈಗಲೇ ಶಾಲೆ ಪ್ರಾರಂಭ ಮಾಡುವುದು ಬೇಡ ಎಂದು ಸಾರ್ವಜನಿಕ ವಲಯದಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪೋಷಕರು ವಿರೋಧಿಸುತ್ತಿದ್ದಾರೆ. 

ಇನ್ನೂ ಒಂದು ತಿಂಗಳು ಶಾಲೆ ಆರಂಭ ಡೌಟ್?

ಶಾಲೆ ಪುನಾರಂಭದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡಾ, ಇನ್ನೊಮ್ಮೆ ಪರಿಶೀಲಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ. ಇನ್ನೂ ಎರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಶಾಲೆ ಆರಂಭದ ಸಾಧಕ ಬಾಧಕಗಳ ಬಗ್ಗೆ ಸುವರ್ಣ ನ್ಯೂಸ್- ಕನ್ನಡ ಪ್ರಭ ರಿಯಾಲಿಟಿ ಚೆಕ್ ಕೂಡಾ ನಡೆಸುತ್ತಿದೆ.