Covid Among Students : ರಾಜ್ಯದಲ್ಲಿ ಮತ್ತೆ ಶಾಲೆಗಳು ಬಂದ್ ಆಗುತ್ತಾ..?
ರಾಜ್ಯದಲ್ಲಿ ಮತ್ತೆ ಕೊರೋನಾ ಕೊಂಚ ಏರಿಕೆಯಾಗಿದ್ದು ಎಲ್ಲೆಡೆ ಆತಂಕ ಉಂಟು ಮಾಡಿದೆ. ಅಲ್ಲದೇ ಅಲ್ಲಲ್ಲಿ ಶಾಲೆಗಳಲ್ಲಿಯು ಮಕ್ಕಳಿಗೆ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗುತ್ತಿದೆ. ಇದರಿಂದ ಮತ್ತೆ ರಾಜ್ಯದಲ್ಲಿ ಶಾಲೆಗಳು ಬಂದ್ ಆಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಆದರೆ ಈ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ತುಮಕೂರು (ನ.29): ರಾಜ್ಯದಲ್ಲಿ ಮತ್ತೆ ಕೊರೋನಾ (Corona) ಕೊಂಚ ಏರಿಕೆಯಾಗಿದ್ದು ಎಲ್ಲೆಡೆ ಆತಂಕ ಉಂಟು ಮಾಡಿದೆ. ಅಲ್ಲದೇ ಅಲ್ಲಲ್ಲಿ ಶಾಲೆಗಳಲ್ಲಿಯು (School) ಮಕ್ಕಳಿಗೆ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗುತ್ತಿದೆ. ಇದರಿಂದ ಮತ್ತೆ ರಾಜ್ಯದಲ್ಲಿ ಶಾಲೆಗಳು ಬಂದ್ ಆಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಆದರೆ ಈ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಸ್ಪಷ್ಟನೆ ನೀಡಿದ್ದಾರೆ.
Covid19: ಸೋಂಕಿತರಲ್ಲೀಗ ಲಸಿಕೆ ಪಡೆದವರೇ ಹೆಚ್ಚು ಜನ..!
ರಾಜ್ಯದಲ್ಲಿ ಮತ್ತೆ ಶಾಲೆಗಳನ್ನು ಬಂದ್ ಮಾಡುವ ನಿರ್ಧಾರ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಪೋಷಕರು (Parents) ಗಾಬರಿ, ಆತಂಕಕ್ಕೆ ಒಳಗಾಗಬಾರದು. ಶಾಲೆ ಆರಂಭಿಸಿ ಶಿಕ್ಷಣ ನೀಡಲು ಆದ್ಯತೆ ನೀಡುತ್ತಾ ಇದ್ದೇವೆ. ಆದರೆ ಕೊರೋನಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಮಾಸ್ಕ್ ಬಳಕೆ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆಗೆ ಸೂಚನೆ ನೀಡಿದ್ದೇವೆ. ತಾಂತ್ರಿ ಸಲಹಾ ಸಮಿತಿ ಸಲಹೆ ಪಡೆದು ಕೇಸ್ ಜಾಸ್ತಿ ಆದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.