Asianet Suvarna News Asianet Suvarna News

1ರಿಂದ 5ನೇ ತರಗತಿ ಆರಂಭ ಯಾವಾಗ? ಈ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ ಬೊಮ್ಮಾಯಿ

Oct 10, 2021, 7:45 PM IST

ಬೆಂಗಳೂರು, (ಅ.10): ರಾಜ್ಯದಲ್ಲಿ ಕೊರೋನಾ ಕಂಟ್ರೋಲ್‌ಗೆ ಬಂದಿದ್ದರಿಂದ 6ರಿಂದ ಎಲ್ಲಾ ತರಗತಿಗಳನ್ನ ಪ್ರಾರಂಭಿಸಲಾಗಿದೆ. ಆದ್ರೆ, 1ರಿಂದ 5ನೇ ತರಗತಿ ಆರಂಭಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ದಸರಾ ಬಳಿಕ 1-5 ನೇ ತರಗತಿ ಆರಂಭಕ್ಕೆ ಚಿಂತನೆ: ಡಾ. ಸುಧಾಕರ್

ದಸರಾ ಆದ ಬಳಿಕ ಸಿಎಂ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಪ್ರಾರಂಭಿಸಲಾಗುವುದು ಎಂದು ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ಇದೀಗ ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, 1ರಿಂದ 5ನೇ ತರಗತಿ ಪ್ರಾರಂಭಿಸುವ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.