'ಫೀಸ್ ಕಟ್ಟಿ'; ಪೋಷಕರಿಗೆ ಪ್ರತಿಷ್ಠಿತ ಕಾಲೇಜುಗಳಿಂದ ಕಿರುಕುಳ
ಕೆಲವು ಪ್ರತಿಷ್ಠಿತ ಕಾಲೇಜುಗಳು ಫೀಸ್ ಕಟ್ಟಿ ಅಂತ ವಿದ್ಯಾರ್ಥಿಗಳ ಪೋಷಕರಿಗೆ ಕಿರುಕುಳ ಕೊಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಡೆಡ್‌ಲೈನ್ ಕೊಟ್ಟು ಫೀಸ್ ಕಟ್ಟಲೇಬೇಕು ಅಂತ ನೋಟಿಸ್ ನೀಡಿದೆ.
ಬೆಂಗಳೂರು (ಜೂ. 16): ಕೆಲವು ಪ್ರತಿಷ್ಠಿತ ಕಾಲೇಜುಗಳು ಫೀಸ್ ಕಟ್ಟಿ ಅಂತ ವಿದ್ಯಾರ್ಥಿಗಳ ಪೋಷಕರಿಗೆ ಕಿರುಕುಳ ಕೊಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಡೆಡ್‌ಲೈನ್ ಕೊಟ್ಟು ಫೀಸ್ ಕಟ್ಟಲೇಬೇಕು ಅಂತ ನೋಟಿಸ್ ನೀಡಿದೆ.
ಶಿಕ್ಷಕರಿಗೆ ಸಂಬಳ ಕೊಡಲು ಹಣವಿಲ್ಲ, ಉಪನ್ಯಾಸಕರಿಗೆ ಲಕ್ಷ ಲಕ್ಷ ಹಣ ಬಿಡುಗಡೆ..!
ಶಾಂತಿ ನಗರದ ಸೇಂಟ್ ಜೋಸೆಫ್ ಕಾಲೇಜಿನ ಮೇಲೆ ಕಿರುಕುಳ ಆರೋಪ ಕೇಳಿ ಬಂದಿದೆ. ಜೂನ್ 15 ರಿಂದ 20 ರೊಳಗೆ ಫೀಸ್ ಕಟ್ಟಲೇಬೇಕು ಎಂದು ನೋಟಿಸ್ ಕೊಟ್ಟಿದೆ. 3 ನೇ ಸೆಮ್ UG ವಿದ್ಯಾರ್ಥಿಗಳ ಪೋಷಕರಿಗೆ ಮೆಸೇಜ್ ಕಳುಹಿಸಲಾಗಿದೆ. ಕಾಲೇಜು ಯಾವಾಗ ಆರಂಭವಾಗುತ್ತದೋ ಗೊತ್ತಿಲ್ಲ. ಲಾಕ್‌ಡೌನ್‌ನಿಂದಾಗಿ ಪೋಷಕರು ಕೂಡಾ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜುಗಳು ಈ ರೀತಿ ಒತ್ತಾಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.