)
ಪೊಲೀಸ್ ಆಗಬೇಕಿದ್ದವನು ಬೆಟ್ಟಿಂಗ್ ಆಡಿ ಸತ್ತ! ಸೋತಿದ್ದು 18 ಲಕ್ಷ, ಗೆದ್ದಿದ್ದು 19 ಕೋಟಿ!
ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡು, ಸಾಲ ಮಾಡಿಕೊಂಡ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ನಗರದ ಸರಸ್ವತಿ ಬಡಾವಣೆಯ ನಿವಾಸಿ ಶಶಿಕುಮಾರ (25) ಮೃತ ಯುವಕ. ಆತ್ಮಹತ್ಯೆಗೆ ಮುನ್ನ 6 ಪುಟಗಳ ಡೆತ್ ನೋಟ್ ಬರೆದು, ಸೆಲ್ಫೀ ವೀಡಿಯೋ ಮಾಡಿದ್ದಾನೆ.
ಆತ ಪೊಲೀಸ್ ಆಗಬೇಕು. ಕಾನೂನಿನ ರಕ್ಷಣೆ ಮಾಡಬೇಕು ಅಂತ ಕನಸು ಕಂಡವನು. ತನ್ನ ಕನಸು ನನಸು ಮಾಡಿಕೊಳ್ಳಲು ಪರೀಕ್ಷೆಗಳನ್ನ ಬರೆದಿದ್ದ. ಆತನ ಹೆತ್ತವರು ಮಗ ಏನಾದ್ರೂ ಸಾಧಿಸಿಯೇ ತೀರುತ್ತಾನೆ ಅಂದುಕೊಂಡಿದ್ರು. ಆದ್ರೆ ಆವತ್ತೊಂದು ದಿನ, ಮನೆಯಲ್ಲಿರುವಾಗ್ಲೇ ಆತ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಯಾಕೆ ಸತ್ತ ಏನಾಯ್ತು ಅಂತ ಯೋಚಿಸುತ್ತಿರುವಾಗ್ಲೇ ಅವನ ಬೆಡ್ ರೂಮ್ನಲ್ಲಿ ಒಂದು ಡೆತ್ ನೋಟ್ ಸಿಕ್ಕಿತ್ತು. ಆತ ಬರೆದಿದ್ದನ್ನ ಕಂಡು ಹೆತ್ತವರೇ ಕಂಗಾಲಾಗಿದ್ರು. ಕಾರಣ ಆತ ಆನ್‌ಲೈನ್ ಬೆಟ್ಟಿಂಗ್ಗೆ ದಾಸನ್ನಾಗಿಬಿಟ್ಟಿದ್ದ. ಅಷ್ಟೇ ಅಲ್ಲ ಆ ಬೆಟ್ಟಿಂಗ್ನಿಂದ ಕೋಟಿ ಲೆಕ್ಕದಲ್ಲಿ ಮೋಸ ಹೋಗಿದ್ದ. ಅಷ್ಟಕ್ಕೂ ಆನ್‌ಲೈನ್ ಜೂಜಿಗೆ ಬಿದ್ದು ಪ್ರಾಣ ಬಿಟ್ಟವನು ಯಾರು? ಆತನಿಗೆ ಮೋಸವಾಗಿದ್ದೇಗೆ? ಬೆಟ್ಟಿಂಗ್, ಆನ್‌ಲೈನ್ ಗೇಮ್ಗಳಿಗೆ ದಾಸರಾಗಿರುವವರು ಮತ್ತು ಪೋಷಕರು ನೋಡಲೇಬೇಕಾದ ಸ್ಟೋರಿಯೇ ಇವತ್ತಿನ ಎಫ್.ಐ.ಆರ್.
₹19 ಕೋಟಿ ಗೆದ್ದಿದ್ದೆ:
ಆನ್‌ಲೈನ್ ಗೇಮಿಂಗ್‌ನಲ್ಲಿ ₹18 ಲಕ್ಷ ಕಳೆದುಕೊಂಡಿದ್ದೇನೆ. ಇದೇ ಆನ್ ಲೈನ್ ಗೇಮಿಂಗ್‌ನಲ್ಲಿ ₹19 ಕೋಟಿಗೂ ಅಧಿಕ ಹಣ ಗೆದ್ದಿದ್ದೇನೆ. ಆದರೆ, ಆನ್‌ಲೈನ್ ಗೇಮ್ ನಡೆಸುವವರು ನನಗೆ ಹಣ ಕೊಟ್ಟಿಲ್ಲ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದೇನೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಟದಲ್ಲಿ ₹19 ಲಕ್ಷ ಕಳೆದುಕೊಂಡು ತೀವ್ರ ಖಿನ್ನತೆಗೆ ಒಳಗಾಗಿದ್ದೇನೆ ಎಂದು ಶಶಿಕುಮಾರ ಡೆತ್ ನೋಟ್‌ನಲ್ಲಿ ವಿವರಿಸಿದ್ದಾರೆ.