ಬಸ್ ಮತ್ತು ಬಸ್ ಡಿಪೋಗಾಗಿ ವಿದ್ಯಾರ್ಥಿಗಳಿಂದ ಜಗಳೂರು To ದಾವಣಗೆರೆ ಪಾದಯಾತ್ರೆ!

ಜಗಳೂರಿನಲ್ಲಿ ಅತಿಹೆಚ್ಚು ದೇವಾಲಯಗಳಿದೆ ಆದ್ರೆ ಬಸ್​ ಸೌಲಭ್ಯವಿಲ್ಲ.  ದಾವಣಗೆರೆ- ಜಗಳೂರು ಬಳ್ಳಾರಿಗೆ ನೇರ ಬಸ್​ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ 32ಕ್ಕೂ ಹೆಚ್ಚು ಸಂಘಟನೆ ಸಾಥ್​ ನೀಡಿದವು.

Share this Video
  • FB
  • Linkdin
  • Whatsapp

ದಾವಣಗೆರೆ: ಜಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಆರಂಭಿಸುವ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಸಾರಿಗೆ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಜಗಳೂರು ಪಟ್ಟಣದಿಂದ ದಾವಣಗೆರೆವರೆಗೆ ಪಾದಾಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಕಳೆದ 20 ವರ್ಷಗಳಿಂದ ಜಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ತೆರೆಯುವ ಬೇಡಿಕೆಯಿದೆ. 2022ರಲ್ಲಿ ಡಿಪೋಗೆ 4 ಎಕೆರೆ ಜಮೀನು ಮಂಜೂರು ಮಾಡಲಾಗಿದೆ. ಜಗಳೂರು ಗ್ರಾಮಾಂತರ ಮಹಿಳೆಯರಿಗೆ ಶಕ್ತಿಯೋಜನೆ ಸೌಲಭ್ಯವಿಲ್ಲ. ಜಗಳೂರಿನಲ್ಲಿ ಅತಿಹೆಚ್ಚು ದೇವಾಲಯಗಳಿದೆ ಆದ್ರೆ ಬಸ್​ ಸೌಲಭ್ಯವಿಲ್ಲ. ದಾವಣಗೆರೆ- ಜಗಳೂರು ಬಳ್ಳಾರಿಗೆ ನೇರ ಬಸ್​ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ 32ಕ್ಕೂ ಹೆಚ್ಚು ಸಂಘಟನೆ ಸಾಥ್​ ನೀಡಿದವು.

Related Video