Today Horoscope: ಇಂದು ಈ ರಾಶಿಯವರಿಗೆ ಆಪ್ತರಿಂದ ದುಃಖ ಉಂಟಾಗಲಿದ್ದು, ಸ್ತ್ರೀಯರಿಗೆ ಬಲವಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಸೋಮವಾರ,ಷಷ್ಠಿ ತಿಥಿ, ಶತಭಿಷ ನಕ್ಷತ್ರ.

ಇಂದು ಷಷ್ಠಿ ಇರುವುದರಿಂದ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಲಾಗುತ್ತದೆ. ಸ್ಕಂದ ಅಂದ್ರೆ ಷಣ್ಮುಖ ಆತನ ಆರಾಧನೆ ಅತ್ಯಂತ ಮಡಿಯನ್ನು ಬಯಸುತ್ತದೆ. ಸಿಂಹ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ವ್ಯಾಪಾರಿಗಳಿಗೆ ವಿಶೇಷ ಫಲ ದೊರೆಯಲಿದೆ. ಬುದ್ಧಿಬಲವಿದೆ. ಪ್ರಶಂಸೆಯ ದಿನವಾಗಿದೆ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯವಿದ್ದು, ಈಶ್ವರ ಪ್ರಾರ್ಥನೆ ಮಾಡಿ. ಕನ್ಯಾ ರಾಶಿಯವರಿಗೆ ಬಂಧು-ಮಿತ್ರರ ಸಹಕಾರ. ವಸ್ತುನಷ್ಟತೆ. ಆಪ್ತರಿಂದ ದುಃಖ. ಸ್ತ್ರೀಯರಿಗೆ ಬಲ. ಹಣಕಾಸಿನ ಸಮೃದ್ಧಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ವೀರ್ ಸಾವರ್ಕರ್‌ಗೆ ಯಾಕಿಷ್ಟು ವಿರೋಧ..? ಅವರು ಗಾಂಧೀಜಿ ಹತ್ಯೆ ಆರೋಪಿಯಾಗಿದ್ರಾ ?

Related Video