Asianet Suvarna News Asianet Suvarna News

ಕಾರು ಬಂದು ಅಪ್ಪಳಿಸಿದ ಜಾಗದಲ್ಲೇ ಯುವಕ-ಯುವತಿಯರ ಟಪ್ಪಾಂಗುಚ್ಚಿ!

Sep 17, 2021, 4:23 PM IST

ಬೆಂಗಳೂರು(ಸೆ. 17)   ಸಾಲು ಸಾಲು ಅಪಘಾತದ ವರದಿಗಳು ಬರುತ್ತಿದ್ದರೂ ಯುವಕ-ಯುವತಿಯರು ಮಾತ್ರ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಡ್ಯಾನ್ಸ್ ಮಾಡಿ ಹುಚ್ಚಾಟ ತೋರಿಸಿದ್ದಾರೆ.ಎಲ್ಲಿ ಭೀಕರ ಅಪಘಾತ ಸಂಭವಿಸಿತ್ತೋ ಅದೇ ಜಾಗದಲ್ಲಿ ಕಾರು ನಿಲ್ಲಿಸಿಕೊಂಡು ನಾಲ್ವರು ಡ್ಯಾನ್ಸ್ ಮಾಡಿದ್ದಾರೆ.

ಬೆಂಗಳೂರು ಭೀಕರ ಅಪಘಾಥದ ದೃಶ್ಯಾವಳಿ

ಐಷಾರಾಮಿ ಕಾರಿನಲ್ಲಿ ಬಂದು ನಿಂತುಕೊಂಡು ಡ್ಯಾನ್ಸ್ ಮಾಡಿದ್ದಾರೆ. ಕ್ಯಾಮರಾ  ನೋಡಿದರೂ ಪೋಸ್ ಕೊಟ್ಟು ಡ್ಯಾನ್ಸ್ ಮಾಡಿದ್ದಾರೆ.   ಕೋರಮಂಗಲದಲ್ಲಿ ಆಡಿ ಕಾರಿನ ಅಪಘಾತ.. . ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಬೈಕ್ ತಳ್ಳಿಕೊಂಡು ಹೋಗುತ್ತಿದ್ದವರಿಗೆ ಅಪ್ಪಳಿಸಿದ ಕಾರು ಪ್ರಕರಣಗಳು ಕಣ್ಣು ಮುಂದೆ ಇದ್ದರೂ ದುಸ್ಸಾಹಸ ಮಾಡಿದ್ದಾರೆ.