Asianet Suvarna News Asianet Suvarna News

ಯೋಗೇಶ್ ಗೌಡ ಕೊಲೆ ಕೇಸ್‌ಗೆ ಮರುಜೀವ; ಮಾಜಿ ಸಚಿವನ ಸೋದರನಿಗೆ ಬಂಧನ ಭೀತಿ?

Sep 14, 2020, 3:45 PM IST

ಬೆಂಗಳೂರು (ಸೆ. 14): ಧಾರಾವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಕೇಸ್‌ಗೆ ಮತ್ತೆ ಮರುಜೀವ ಬಂದಿದೆ. ಈ ಕೊಲೆ ಕೇಸ್‌ ನಡೆದಾಗ ಸುವರ್ಣ ನ್ಯೂಸ್ ಇದರ ಬಗ್ಗೆ ಸಾಕ್ಷಿ ಸಮೇತ ಪ್ರಸಾರ ಮಾಡಿತ್ತು.ಕೊಲೆಯ ತನಿಖೆಗೆ ನಿಂತ ಪೊಲೀಸ್ ಅಧಿಕಾರಿಗಳು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರು. ಆ ನಂತರ ಪ್ರಕರಣ  ಸಿಬಿಐಗೆ ಹೋಗಿತ್ತು. ಈಗ ತನಿಖೆ ಗಂಭೀರ ಘಟ್ಟಕ್ಕೆ ಬಂದು ನಿಂತಿದೆ. 

ಪ್ರಕರಣವನ್ನು ಮುಚ್ಚಿ ಹಾಕಲು ಯಾರ್ಯಾರೆಲ್ಲಾ ಸರ್ಕಸ್ ಮಾಡಿದ್ರು? ಇದರ ಹಿಂದಿರುವ ರಾಜಕಾರಣಿ ಯಾರು? ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ತನಿಖೆಯ ವರದಿಯನ್ನು ಸಿಬಿಐ ರಾಜ್ಯಸರ್ಕಾರಕ್ಕೆ ನೀಡಿದೆ. ಈಗ ಪೊಲೀಸ್ ಅಧಿಕಾರಿಗಳಿಗೆ, ಹಿಂದಿರುವ ರಾಜಕಾರಣಿಗೆ ಬಂಧನ ಭೀತಿ ಶುರುವಾಗಿದೆ. ಏನಿದೆ ರಿಪೋರ್ಟ್‌ನಲ್ಲಿ? ಇದು ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್ ಸುದ್ದಿ!

Video Top Stories