
ಪಾಕಿಸ್ತಾನದವನನ್ನ ಮದುವೆಯಾಗಲು ಹೊರಟಿದ್ದವಳು ಹೆಣವಾದಳು: ನ್ಯೂ ಇಯರ್ ಪಾರ್ಟಿಯಲ್ಲಿ ನಡೆದಿದ್ದೇನು?
ಇಬ್ಬರು ಸಾವಿನ ಮನೆಯ ಬಾಗಲಿಗಿ ಹೋಗಿ ನಿಂತಿದ್ರು. ಉಜ್ಮಾ ಪ್ರಾಣವನ್ನೇ ಬಿಟ್ಟರೆ.. ಇಮ್ದಾದ್ ಅಸ್ವಸ್ಥನ್ನಾಗಿ ಆಸ್ಪತ್ರೆ ಸೇರಿದ. ಅಷ್ಟಕ್ಕೂ ಆ ಮಟ್ಟಿಗೆ ಇಬ್ಬರೂ ಪ್ರೀತಿಸುತ್ತಿದ್ರೂ. ಗಂಡ ಹೆಂಡತಿ ರೀತಿಯೇ ಇದ್ರೂ.. ಆದ್ರೂ ಆವತ್ತು ಇಬ್ಬರೂ ವಿಷ ಕುಡಿದಿದ್ದೇಕೆ..? ಆ ರೂಮಿನಲ್ಲಿ ಆವತ್ತು ನಡೆದಿದ್ದೇನು..? ಈ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟ ಪೊಲೀಸರಿಗೆ ಸಿಕ್ಕಿದ್ದು ಒಂದು ಶಾಕಿಂಗ್ ಮಾಹಿತಿ.
ಬೆಂಗಳೂರು(ಜ.22): ಆಕೆ ಒಂಟಿ ಜೀವನ ನಡೆಸುತ್ತಿದ್ದವಳು.. ಗಂಡ ಡಿವೋರ್ಸ್ ಕೊಟ್ಟು ಬೇರೆಯಾದ್ರೆ ಮಕ್ಕಳು ಅವನ ಜೊತೆಯೇ ಹೋಗಿದ್ವು.. ಕಳೆದ ಮೂರು ವರ್ಷದಿಂದ ಆಕೆ ತನ್ನ ಜೀವನವನ್ನ ನೋಡಿಕೊಂಡು ಹೋಗ್ತಿದ್ದಳು.. ಆದ್ರೆ ಆವತ್ತೊಂದು ದಿನ ನ್ಯೂ ಇಯರ್ ಪಾರ್ಟಿ ಮಾಡಲು ಸಂಬಂಧಿಕನ ಮನೆಗೆ ಹೋಗಿದ್ಲು.. ಆದ್ರೆ ಆಕೆ ಹೋದ ಮರು ದಿನ ಹೆಣವಾಗಿ ಸಿಕ್ಕಿದ್ದಳು. ಸಂಬಂಧಿಕನ ಮನೆಯಲ್ಲೇ ಆಕೆ ಹೆಣವಾಗಿ ಹೋಗಿದ್ದಳು.
ಇನ್ನೂ ಸಂಬಂಧಿಕ ಕೂಡ ವಿಷ ಕುಡಿದುಬಿಟ್ಟಿದ್ದ. ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತ ಆತನೇ ಮೆಸೆಜ್ ಮಾಡಿದ್ದ.. ಅದ್ರೆ ಅವನ ಮೆಸೆಜ್ ನೋಡಿ ಹೋದವರಿಗೆ ಸಿಕ್ಕಿದ್ದು ಅವಳ ಡೆಡ್ ಬಾಡಿ ಮತ್ತು ಜೀವನ್ಮರಣದ ಹೋರಾಟ ಮಾಡ್ತಿದ್ದ ಅಕೆಯ ಸಂಬಂಧಿಕ.. ಅಷ್ಟಕ್ಕೂ ಅವರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರ ಮಾಡಿದ್ದೇಕೆ? ಆವತ್ತು ಆ ರೂಮ್ನಲ್ಲಿ ಏನಾಯ್ತು?. ಮಹಿಳೆಯೊಬ್ಬಳ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್.ಐ.ಆರ್.
ಹೌದು.. ಇಬ್ಬರು ಸಾವಿನ ಮನೆಯ ಬಾಗಲಿಗಿ ಹೋಗಿ ನಿಂತಿದ್ರು. ಉಜ್ಮಾ ಪ್ರಾಣವನ್ನೇ ಬಿಟ್ಟರೆ.. ಇಮ್ದಾದ್ ಅಸ್ವಸ್ಥನ್ನಾಗಿ ಆಸ್ಪತ್ರೆ ಸೇರಿದ. ಅಷ್ಟಕ್ಕೂ ಆ ಮಟ್ಟಿಗೆ ಇಬ್ಬರೂ ಪ್ರೀತಿಸುತ್ತಿದ್ರೂ. ಗಂಡ ಹೆಂಡತಿ ರೀತಿಯೇ ಇದ್ರೂ.. ಆದ್ರೂ ಆವತ್ತು ಇಬ್ಬರೂ ವಿಷ ಕುಡಿದಿದ್ದೇಕೆ..? ಆ ರೂಮಿನಲ್ಲಿ ಆವತ್ತು ನಡೆದಿದ್ದೇನು..? ಈ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟ ಪೊಲೀಸರಿಗೆ ಸಿಕ್ಕಿದ್ದು ಒಂದು ಶಾಕಿಂಗ್ ಮಾಹಿತಿ.
ಇಬ್ಬರೂ ತಮ್ಮ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟು... ಹಳೇ ಪ್ರೀತಿಗೆ ಓಕೆ ಅಂದಿದ್ರು.. ಇತ್ತ ಇಮ್ದಾದ್ ಉಜ್ಮಾಳನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ.. ಆದ್ರೆ ಉಜ್ಮಾ ತಮ್ಮ ರಿಲೇಷನ್ಶಿಪ್ ಬಗ್ಗೆ ಅಷ್ಟು ಸೀರಿಯಸ್ ಆಗಿರಲಿಲ್ಲ.. ಹೀಗಾಗೇ ಪ್ರೇಯಸಿಯ ಮೊಬೈಲ್ ಅನ್ನ ಟ್ರ್ಯಾಪ್ ಮಾಡಲು ಆರಂಭಿಸಿದ.. ಆಕೆಗೆ ಬರ್ತಿದ್ದ ಮೆಸೆಜ್.. ಕಾಲ್ ಇವನಿಗೆ ಗೊತ್ತಾಗ್ತಿತ್ತು.. ಒಂದು ದಿನ ಆಕೆಗೆ ಎರಡನೇ ಮದುವೆಗೆ ಆಕೆಯ ಕುಟುಂಬ ತಯಾರಿ ನಡೆಸುತ್ತಿದ್ದಿದ್ದು ಗೊತ್ತಾಗಿತ್ತು.. ಮನೆಯಲ್ಲಿ ತೋರಿಸಿದ್ದ ಪಾಕಿಸ್ತಾನ ಮೂಲದ ಆಸ್ಟ್ರೀಯ ಹುಡುಗನಿಗೆ ಈ ಉಜ್ಮಾ ಓಕೆ ಅಂತಲೂ ಹೇಳಿಬಿಟ್ಟಿದ್ಲು.. ಯಾವಾಗ ಈ ವಿಷಯ ಗೊತ್ತಾಯ್ತೋ ಇಮ್ದಾದ್ ಒಂದು ಪ್ಲಾನ್ ರೆಡಿ ಮಾಡಿದ.. ನ್ಯೂ ಇಯರ್ ಪಾರ್ಟಿಗೆ ಅಂತ ಕರೆದು ಸೈಲೆಂಟಾಗಿ ಅವಳ ಕಥೆಯನ್ನೇ ಮುಗಿಸಿಬಿಟ್ಟಿದ್ದ.. ನಂತರ ಸೂಸೈಟ್ ನಾಟಕ ಶುರು ಮಾಡಿದ ಆದ್ರೆ ಅವನ ನಾಟಕ ಹೆಚ್ಚು ದಿನ ನಡೆಯಲಿಲ್ಲ.
ಡಿವೋರ್ಸ್ ಆಗಿ ತನ್ನ ಪಾಡಿಗೆ ತಾನು ಇದ್ದವಳಿಗೆ ಇಮ್ದಾದ್ ಮತ್ತೆ ಪ್ರೇಮದ ಬಲೆ ಬೀಸಿದ್ದ.. ಹಳೆ ಪ್ರೇಮಿ ಅಂತ ಅವಳೂ ಅವನು ಹೇಳಿದಂತೆಲ್ಲಾ ಕೇಳಿಬಿಟ್ಟಳು.. ಪರಿಣಾಮ ಇವತ್ತು ಮಸಣ ಸೇರಿದ್ದಾಳೆ.. ಇನ್ನೂ ಪ್ರೇಯಸಿಯನ್ನ ಕೊಂದು ಇನ್ನಲ್ಲದಂತೆ ನಾಟಕವಾಡಲು ಹೋದ ಈ ಇಮ್ದಾದ್ ಕೊನೆಗೂ ತಗ್ಲಾಕಿಕೊಂಡಿದ್ದಾನೆ.