ಅತ್ತೆ ಆಯೋಜಿಸಿದ ಪಾರ್ಟಿಗೆ ಹಾಜರಾದ ಅಳಿಯನ ಖೇಲ್ ಖತಂ, ತನಿಖೆ ವೇಳೆ ದಂಗಾದ ಪೊಲೀಸ್
ಆತ ರಿಯಲ್ ಎಸ್ಟೇಟ್ ಉದ್ಯಮಿ. ಶಾಸಕರೊಬ್ಬರ ಆಪ್ತ. ಆದ್ರೆ ಆವತ್ತು ತನ್ನ ಹೆಂಡತಿ ಮತ್ತು ಅತ್ತೆಯೊಂದಿಗೆ ಪಾರ್ಟಿಗೆ ಹೋಗಿದ್ದ. ಕುಟುಂಬದ ಪಾರ್ಟಿ ಕಾರಣ ಗನ್‌ಮ್ಯಾನ್ ಬಿಟ್ಟು ಪಾರ್ಟಿಗೆ ಹೋಗಿದ್ದ ಆತ ಹೆಣವಾಗಿದ್ದ. ಪಾರ್ಟಿಯಲ್ಲಿ ಏನಾಯ್ತು?
ಹಣ, ಅಧಿಕಾರಕ್ಕೆ ಕೊರತೆಯಿಲ್ಲ. ಇದರ ನಡುವೆ ಪತ್ನಿ ಹಾಗೂ ಅತ್ತೆ ಅದ್ದೂರಿ ಪಾರ್ಟಿ ಆಯೋಜಿಸಿದ್ದಾರೆ. ಕುಟುಂಬದ ಸದಸ್ಯರ ಪಾರ್ಟಿಗೆ ಗನ್‌ಮ್ಯಾನ್‌ಗೂ ಎಂಟ್ರಿ ಬೇಡ ಎಂದು ಖುದ್ದಾಗಿ ಹೋಗಿದ್ದ ಉದ್ಯಮಿ ಉಸಿರು ಚೆಲ್ಲಿದ್ದ. ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿದ್ದಾರೆ. ಅಸ್ಸಾಂ ಗಡಿಯಿಂದ ಅಮ್ಮ ಮಗ್ಗಳನ್ನು ಕರೆಯಿಸಿ ವಿಚಾರಣೆ ಮಾಡಿದ ಘಟನೆ ಹೊರಬಂದಿದೆ.