ವಿಜಯಪುರದಲ್ಲಿ ರೌಡಿಗಳ ಪರೇಡ್: ಧರ್ಮರಾಜ್‌ ಚೇಲಾಗಳ ಚಳಿ ಬಿಡಿಸಿದ ಎಸ್ಪಿ

ಭೀಮಾ ತೀರದ ಹಂತಕರ ಹೆಡೆಮುರಿ ಕಟ್ಟಿದ್ದಾರೆ ಪೊಲೀಸರು. ಶಾಂತಿ ಕಾಪಾಡಲು ರೌಡಿಶೀಟರ್‌ಗಳ ಪರೇಡ್ ನಡೆಸಲಾಗಿದೆ. ಡಿಎಂಸಿ ಹೆಸರು ಹೇಳಿದ ಹುಡುಗರಿಗೆ ಎಸ್‌ಪಿ ಆನಂದ್ ಕುಮಾರ್ ಬಿಸಿ ಮುಟ್ಟಿಸಿದ್ದಾರೆ. 

Share this Video
  • FB
  • Linkdin
  • Whatsapp

ವಿಜಯಪುರ (ಜೂ. 26): ಭೀಮಾ ತೀರದ (Bhimatheera) ಹಂತಕರ ಹೆಡೆಮುರಿ ಕಟ್ಟಿದ್ದಾರೆ ಪೊಲೀಸರು. ಶಾಂತಿ ಕಾಪಾಡಲು ರೌಡಿಶೀಟರ್‌ಗಳ ಪರೇಡ್ ನಡೆಸಲಾಗಿದೆ. ಡಿಎಂಸಿ ಹೆಸರು ಹೇಳಿದ ಹುಡುಗರಿಗೆ ಎಸ್‌ಪಿ ಆನಂದ್ ಕುಮಾರ್ ಬಿಸಿ ಮುಟ್ಟಿಸಿದ್ದಾರೆ. ಎಸ್‌ಪಿ ಹೊಡೆತಕ್ಕೆ ಧರ್ಮರಾಜ್ ಚಡಚಣ ಹುಡುಗರು ಥಂಡಾ ಹೊಡೆದಿದ್ದಾರೆ. 

ಕವರ್ ಸ್ಟೋರಿ: ವಿಕ್ಟೋರಿಯಾ ಆಸ್ಪತ್ರೆಯ ಮೆಡಿಸನ್ ಸಾಗಾಟ ಬಯಲು: ಆರೋಗ್ಯ ಇಲಾಖೆಯಿಂದ ತನಿಖೆ ಶುರು

ವಿಜಯಪುರ ಜಿಲ್ಲೆಯ ಭೀಮಾತೀರ ಐದು ದಶಕಗಳ ರಕ್ತಪಾತದ ಇತಿಹಾಸ ಹೊಂದಿದೆ. 4 ವರ್ಷಗಳ ಹಿಂದೆ ಮಹಾದೇವ ಬೈರಗೊಂಡ ಮೇಲೆ ಹಾಡುಹಗಲೇ ಅಟ್ಯಾಕ್‌ ನಡೆಯೋ ಮೂಲಕ ಭೀಮಾತೀರ ಸಧ್ಯಕ್ಕೆ ತಣ್ಣಗಿರುವಂತೆ ಕಾಣ್ತಿದೆ. ಆದ್ರೆ ಈ ಭಾಗದಲ್ಲಿ ಅಪರಾಧ ಕೃತ್ಯಗಳನ್ನ ತಡೆಯೋದು ಪೊಲೀಸ್‌ ಇಲಾಖೆಗೆ ಸವಾಲೆ ಸರಿ. ಯಾಕಂದ್ರೆ 50 ವರ್ಷಗಳ ಇತಿಹಾಸವನ್ನ ಹೊಂದಿದೆ ಭೀಮಾತೀರದ ಪಾತಕಲೋಕ. ಸಧ್ಯ ಭೀಮಾತೀರದಲ್ಲಿನ ಅಪರಾಧಿಕ ಕೃತ್ಯಗಳನ್ನ ತಡೆಯಲು ಎಸ್ಪಿ ಆನಂದಕುಮಾರ್‌ ಇನ್ನಿಲ್ಲದ ಕಠಿಣ ಕ್ರಮಗಳನ್ನ ಕೈಗೊಳ್ತಿದ್ದಾರೆ. ಭೀಮಾತೀರದ ಹತ್ಯಾಕಾಂಡಗಳಲ್ಲಿ ಭಾಗಿಯಾಗಿರೋ ರೌಡಿಗಳಿಗೆ ಹಳೆ ಹಂತಕರಿಗೆ ಎಸ್ಪಿ ಆನಂದಕುಮಾರ್‌ ಮುಲಾಜೇ ಇಲ್ಲದಂತೆ ಖಡಕ್ಕಾಗಿ ವಾರ್ನಿಂಗ್‌ ಗಳನ್ನ ಮಾಡಿದ್ದಾರೆ. ಭೀಮಾತೀರದಲ್ಲಿ ಬಾಲ ಬಿಚ್ಚಿದ್ರೆ ಬಾಲವನ್ನೆ ಕಟ್‌ ಮಾಡಿ ಬಿಡ್ತೀವಿ ಎನ್ನುವ ಮೂಲಕ ಇನ್ಮುಂದೆ ಪೊಲೀಸ್‌ ಇಲಾಖೆ ಸಹಿಸೋದಿಲ್ಲ ಎನ್ನುವ ಸಂದೇಶವನ್ನ ನೀಡಿದ್ದಾರೆ.

Related Video