ಪುಷ್ಪಾ ಸ್ಟೈಲಲ್ಲಿ ಕಳ್ಳರು, ಸಿಂಗಂ ಸ್ಟೈಲಲ್ಲಿ ಪೊಲೀಸರು: ರೈತರನ್ನ ಮೋಸ ಮಾಡಿದ್ದ ತಂಡ ಅಂದರ್‌

ಇದು ನೀವೆಂದು ಕೇಳಿರದ ಪೊಲೀಸ್‌ ಚೇಜಿಂಗ್‌ ಸ್ಟೋರಿ.. ಹೊರರಾಜ್ಯದಲ್ಲಿ ಕರ್ನಾಟಕದ ಖಾಕಿಪಡೆಯ ಮಿಂಚಿನ ಕಾರ್ಯಚರಣೆಯ ಕಥೆ ಇದು.. ಆ ಕಳ್ಳರು ಕದ್ದಿದ್ದು ಬರೊಬ್ಬರಿ 117 ಟನ್ ಒಣ ದ್ರಾಕ್ಷಿಯನ್ನ. ನಮ್ಮ ರೈತರು ತಿಂಗಳುಗಟ್ಟಲೆ ಶ್ರಮಪಟ್ಟು ನಂತರ ಇನ್ನೇನು ಅದರ ಪ್ರತಿಫಲವನ್ನ ಅನುಭವಿಸಬೇಕು ಅನ್ನುವಷ್ಟರಲ್ಲಿ, ಖದೀಮರು ಮಾಲ್ ಸಮೇತ ಎಸ್ಕೇಪ್. 

First Published Jul 10, 2022, 4:49 PM IST | Last Updated Jul 10, 2022, 4:49 PM IST

ವಿಜಯಪುರ, (ಜುಲೈ.10): ಇದು ನೀವೆಂದು ಕೇಳಿರದ ಪೊಲೀಸ್‌ ಚೇಜಿಂಗ್‌ ಸ್ಟೋರಿ.. ಹೊರರಾಜ್ಯದಲ್ಲಿ ಕರ್ನಾಟಕದ ಖಾಕಿಪಡೆಯ ಮಿಂಚಿನ ಕಾರ್ಯಚರಣೆಯ ಕಥೆ ಇದು.. ಆ ಕಳ್ಳರು ಕದ್ದಿದ್ದು ಬರೊಬ್ಬರಿ 117 ಟನ್ ಒಣ ದ್ರಾಕ್ಷಿಯನ್ನ. ನಮ್ಮ ರೈತರು ತಿಂಗಳುಗಟ್ಟಲೆ ಶ್ರಮಪಟ್ಟು ನಂತರ ಇನ್ನೇನು ಅದರ ಪ್ರತಿಫಲವನ್ನ ಅನುಭವಿಸಬೇಕು ಅನ್ನುವಷ್ಟರಲ್ಲಿ, ಖದೀಮರು ಮಾಲ್ ಸಮೇತ ಎಸ್ಕೇಪ್. 

ಬೆಂಗಳೂರು: ವ್ಯಾಪಾರ ನಷ್ಟದಿಂದ ಚಿನ್ನದಂಗಡಿ ದರೋಡೆ ಮಾಡಿದ್ರು!

ಕಳ್ಳರು ಪುಷ್ಪಾ ಸ್ಟೈಲ್ನಲ್ಲಿ ಕಳ್ಳತನ ಮಾಡಿದ್ರೆ ನಮ್ಮ ಪೊಲೀಸರು ಸಿಂಗಂ ಸ್ಟೈಲ್ನಲ್ಲಿ ಕಾರ್ಯಚರಣೆ ನಡೆಸಿದ್ರು. ಈ ಮೂಲಕ ರೈತರ ಕೋಟಿ ಕೋಟಿ ಹಣ ಸೇಫ್. ಹೀಗೆ ಟನ್ಗಟ್ಟಲೆ ಒಣ ದ್ರಾಕ್ಷಿಯನ್ನ ಕದ್ದು ನಂತರ ಅದನ್ನ ಗುಜರಾತ್ನಲ್ಲಿ ಮಾರಾಟ ಮಾಡಲು ಹೊರಟಿದ್ದ ಖತರ್ನಾಕ್ ಗ್ಯಾಂಗ್ನ ರೋಮಾಂಚಕಾರಿಯಾಗಿ ಕಾರ್ಯಚರಣೆ ನಡೆಸಿ ಎತ್ತಾಕೊಂಡು ಬಂದ ನಮ್ಮ ವಿಜಯಪುರ ಪೊಲೀಸರ ಆಪರೇಷನ್ ಕಿಶ್ಮಿಶ್ ಕಥೆಯೇ ಇವತ್ತಿನ ಎಫ್.ಐ.ಆರ್..