Suicide Case: ಪೊಲೀಸರ ನಡೆಯ ಸುತ್ತ ಅನುಮಾನದ ಹುತ್ತ..!
* ಹೆಂಡತಿ ಮತ್ತು ಆಕೆಯ ಕುಟುಂಬದ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ
* ಮೆಜೆಸ್ಟಿಕ್ ಬಳಿಯ ಹೋಟೆಲ್‌ನಲ್ಲಿ ಸೂಸೈಡ್ ಮಾಡಿಕೊಂಡಿದ್ದ ಬಸವರಾಜ
* ಘಟನೆ ನಡೆದು 11 ದಿನಗಳಾದ್ರೂ ಯಾವುದೇ ಕ್ರಮಕೈಗೊಳ್ಳದ ಪೊಲೀಸರು
ಬೆಂಗಳೂರು(ಡಿ.23): ಆತ್ಮಹತ್ಯೆ ಕೇಸ್‌ನಲ್ಲಿ ಆರೋಪಿಗಳ ಪರ ನಿಂತ್ರಾ ಪೊಲೀಸರು?. ಹೌದು, ಇಂತಹದೊಂದು ಅನುಮಾನ ಉಪ್ಪಾರಪೇಟೆ ಪೊಲೀಸರ ಮೇಲೆ ಬಿದ್ದಿದೆ. ವ್ಯಕ್ತಿಯೊಬ್ಬರು ಹೆಂಡತಿ ಮತ್ತು ಆಕೆಯ ಕುಟುಂಬದ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಯಾದಗಿರಿಯ ಬಸವರಾಜ ಎಂಬುವರು ಡಿ.12 ರಂದು ಪೆಟ್ರೋಲ್ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೆಜೆಸ್ಟಿಕ್ ಬಳಿಯ ಹೋಟೆಲ್‌ನಲ್ಲಿ ಬಸವರಾಜ ಸೂಸೈಡ್ ಮಾಡಿಕೊಂಡಿದ್ದರು. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿದ್ರೂ ಬದುಕಿರಲಿಲ್ಲ. ಸಾಯೋಕು ಮುನ್ನ ಪೊಲೀಸರಿಗೆ ಹೇಳಿಕೆಯನ್ನ ಕೊಟ್ಟಿದ್ದರು. ಘಟನೆ ನಡೆದು 11 ದಿನಗಳಾದ್ರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಆರೋಪಿಗಳ ರಕ್ಷಣೆಗೆ ಪ್ರಭಾವ ಬೀರಿದ್ರಾ ಪೊಲೀಸರು ಎಂಬ ಅನುಮಾನದ ಹುತ್ತ ಆವರಿಸಿದೆ.
Karnataka Bandh: ಕನ್ನಡಮ್ಮನಿಗೆ ಬೈದ್ರೆ ಸಾಯ್ಸೋಕು ಹೇಸಲ್ಲ: ಅದಿತಿ ಪ್ರಭುದೇವ