ಬಂಡೇಮಠದ ಸ್ವಾಮಿ ಆತ್ಮಹತ್ಯೆ ಕೇಸ್: ಮೊಬೈಲ್‌ನಲ್ಲಿ ಅಡಗಿದೆ ಹನಿಟ್ರ್ಯಾಪ್ ರಹಸ್ಯ
ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಅವರ ಮೊಬೈಲ್‌ನಲ್ಲಿ ಅನೇಕ ವಿಚಾರಗಳು ಬಯಲಾಗಿವೆ.
ಕುಂಚಗಲ್ ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕಾಗಿ ನಡೆದಿದ್ದು, ಪೊಲೀಸರು ಸ್ವಾಮೀಜಿಯ ಎರಡು ಮೊಬೈಲ್'ಗಳ ಲಾಕ್ ಓಪನ್ ಮಾಡಿದ್ದಾರೆ. ಅದರಲ್ಲಿ ಬ್ಲಾಕ್ ಮೇಲರ್ಸ್ ಸ್ವಾಮೀಜಿಗೆ ಕಳುಹಿಸಿದ್ದ 3 ವಿಡಿಯೋಗಳು ಪತ್ತೆಯಾಗಿವೆ. ಒಂದು ವಿಡಿಯೋದಲ್ಲಿ ಓರ್ವ ಯುವತಿ ಫೋಟೊ ಇದ್ದು,
ಆ ಯುವತಿ ಯಾರು ಎಂಬ ಹುಡುಕಾಟ ನಡೆದಿದೆ. ಆದರೆ ಅವಳ ನಂಬರ್ ಸ್ವಿಚ್ ಆಫ್ ಆಗಿದೆ. ಸಧ್ಯ ಸ್ವಾಮೀಜಿ ಮೊಬೈಲ್'ನ್ನು ಎಫ್.ಎಸ್.ಎಲ್'ಗೆ ರವಾನೆ ಮಾಡಲಾಗಿದೆ.