ಶಂಕರಣ್ಣ ಸಾವಿನ ಕಾರಣ ಬಿಚ್ಚಿಟ್ಟ ತಾಯಿ.. ಮದುವೆ ಆದ ಮೇಲೆ ಏನಾಗಿತ್ತು?

* 25 ವರ್ಷದ ಯುವತಿ ಜೊತೆ ವಿವಾಹವಾಗಿದ್ದ 45 ವರ್ಷದ ಶಂಕರಪ್ಪ ಆತ್ಮಹತ್ಯೆ
* ಮದ್ವೆಯಾದ 5 ತಿಂಗಳಿಗೇ ದುರಂತ ಅಂತ್ಯ ಕಂಡ ಶಂಕರಣ್ಣ
* ಮಗನ ಸಾವಿಗೆ ಸೊಸೆಯೇ ಕಾರಣ ಎಂದು ತಾಯಿ ದೂರು
* ರಂಗಮ್ಮನ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲು

First Published Mar 29, 2022, 8:04 PM IST | Last Updated Mar 29, 2022, 8:04 PM IST

ತುಮಕೂರು(ಮಾ. 29)  ಶಂಕರಪ್ಪ ಆತ್ಮಹತ್ಯೆ (suicide) ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿದೆ. ಮಗನ (Son) ಸಾವಿಗೆ (Death) ಸೊಸೆಯೇ ಕಾರಣ ಎಂದು ಶಂಕರಪ್ಪ ತಾಯಿ ದೂರು ನೀಡಿದ್ದಾರೆ. ರಂಗಮ್ಮ ನೀಡಿದ ದೂರಿನ ಆಧಾರದಲ್ಲಿ ಎಫ್ ಐಆರ್ (FIR) ದಾಖಲಿಸಿಕೊಳ್ಳಲಾಗಿದೆ.

ನಾನು ಪ್ರೆಗ್ನೆಂಟ್, ಎಲ್ಲ ಸೇರಿ ಕಾಟ ಕೊಟ್ರು, ಶಂಕ್ರಣ್ಣ ಆತ್ಮಹತ್ಯೆಗೆ ಕಾರಣ ಹೇಳಿದ ಪತ್ನಿ

ಶಂಕರಪ್ಪ ಹೆಸರಲ್ಲಿ 2.5 ಎಕರೆ ಜಮೀನಿದೆ. ಇದನ್ನು ಮಾರಾಟ ಮಾಡಿ ಬೆಂಗಳೂರು (Bengaluru) ಅಥವಾ ಮೈಸೂರಿಗೆ (Mysuru) ಹೋಗಿ ನೆಲೆಸೋಣ ಎಂದು ಮದುವೆ ಆದಾಗಿನಿಂದ  ಪತ್ನಿ ಮೇಘನಾ ಒತ್ತಾಯಿಸುತ್ತಿದ್ದಳು ಎಂಬ ಆರೋಪ ಕೇಳಿ  ಬಂದಿತ್ತು.