Asianet Suvarna News Asianet Suvarna News

Bengaluru: ನೀನಿಲ್ಲದಿದ್ರೆ ಸಾಯ್ತೀನೆಂದ ಪ್ರೇಯಸಿಗೆ ವಿಷ ತಂದುಕೊಟ್ಟ ಸಾಯಿಸಿದ ಟಿಕ್‌ಟಾಕ್‌ ಪ್ರೇಮಿ

ಟಿಕ್‌ಟಾಕ್‌ನಲ್ಲಿ ಪರಿಚಯವಾಗಿ, ಇನ್ಸ್‌ಸ್ಟಾಗ್ರಾಂನಲ್ಲಿ ಪ್ರೀತಿ ಮಾಡಿ, 5 ವರ್ಷಗಳ ಕಾಲ ಊರೆಲ್ಲಾ ಸುತ್ತಾಡಿದ್ದಾರೆ. ಇನ್ನು ಹುಡುಗಿ ನೀನಿಲ್ಲದೆ ನಾನಿರಲ್ಲ ಸಾಯ್ತೀನಿ ಎಂದಾಗ ಯುವಕ ವಿಷ ತಂದುಕೊಟ್ಟು ಸಾಯಿಸಿದ್ದಾರೆ. 

ಬೆಂಗಳೂರು (ಸೆ.20): ಟಿಕ್‌ಟಾಕ್‌ ಮತ್ತು ಇನ್ಸ್ಟಾ ಮೂಲಕ ಪ್ರೇಮ ಪಕ್ಷಿಗಳಾಗೋ ಅಬ್ರಾರ್ ಮತ್ತು ಮುಸ್ಕಾನ್ ಬೆಂಗಳೂರಿನ ಮೂಲೆ ಮೂಲೆಯನ್ನ ಸುತ್ತಾಡಿದ್ದಾರೆ. ಹೀಗೆ ಸುತ್ತಾಡುತ್ತಾ 5 ವರ್ಷ ಕಳೆದುಬಿಡುತ್ತೆ. ಆದ್ರೆ ಯಾವಾಗ ಮುಸ್ಕಾನ್ ಮದುವೆ ಯೋಚನೆ ಮಾಡಿದ್ಲೋ ಅಬ್ರಾರ್ ನಿಧಾನವಾಗಿ ಬದಲಾಗೋದಕ್ಕೆ ಶುರು ಮಾಡಿದ್ದಾನೆ. ಅವಳ ಮೇಲೆ ಇಂಟರೆಸ್ಟ್ ಕಳೆದುಕೊಳ್ಳೋಕೆ ಶುರುವಾಗಿದೆ. ಕೊನೆಗೆ ಅವಳು ಬೇಡವೇ ಬೇಡ ಅನ್ನೋ ನಿರ್ಧಾರ ಕೂಡ ಮಾಡಿದ್ದನು. ಇನ್ನೂ ಆಕೆಯನ್ನ ಎಷ್ಟರ ಮಟ್ಟಿಗೆ ಆತ ದ್ವೇಷಿಸೋಕೆ ಶುರು ಮಾಡಿದ ಅಂದ್ರೆ ನಾನು ವಿಷ ಕುಡೀತೀನಿ ಅಂತ ಮುಸ್ಕಾನ್ ಹೇಳಿದಾಗ ಈತನೇ ಇಲಿ ಪಾಷಣವನ್ನ ತಂದುಕೊಟ್ಟಿದ್ದನು.

ಹೌದು, ವಿಷ ತಂದು ಕೊಡು ಅಂದಿದ ತಕ್ಷಣ ಈ ಕಿರಾತಕ ಹೋಗಿ ಒಂದು ಬಾಟೆಲ್ ಇಲಿ ಪಾಷಾಣ ತಂದುಕೊಟ್ಟುಬಿಟ್ಟಿದ್ದಾನೆ.  ನೀನು ಸತ್ತರೂ ಮದುವೆಯಾಗಲ್ಲ ಅಂದಿದ್ದ ಪ್ರೇಮಿಯೇ 5 ವರ್ಷ ಪ್ರೀತಿಸಿದ ಪ್ರೇಯಸಿಗೆ ವಿಷ ತಂದುಕೊಟ್ಟಿದ್ದ. ಆಕೆಯೋ ಅವನೇ ಬೇಡ ಅಂದಮೇಲೆ ನಾನೇಕೆ ಬದುಕಿರಬೇಕು ಅಂತ ಯೋಚಿಸಿ ಲವ್ವರ್ ತಂದುಕೊಟ್ಟ ವಿಷವನ್ನ ಕುಡಿದು ಬಿಟ್ಟಿದ್ದಾಳೆ. ಇದನ್ನ ಗಮನಿಸಿದ ಆಕೆಯ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಆಕೆ ಮಾತ್ರ ಬದುಕುಳಿಯಲಿಲ್ಲ. ವಿಷ ಕುಡಿಸಿದ ಲವ್ವರ್ ಆಕೆ ಸತ್ತ ಮೆಲೂ ಅವಳನ್ನ ಬಿಟ್ಟಿರಲಿಲ್ಲ. ಅವಳ ಸತ್ತ ನಂತರ ಆಸ್ಪತ್ರೆಗೆ ಬಂದ ಅಬ್ರಾರ್ ಅವಳ ಮೊಬೈಲ್ ಅನ್ನೇ ಕದ್ದೊಯ್ದಿದ್ದಾನೆ. ನಂತರ, ಅವರಿಬ್ಬರು ಜೊತೆಗಿರುವ ಎಲ್ಲ ಫೋಟೋ, ವಿಡಿಯೋ, ಚಾಟಿಂಗ್‌ ಅನ್ನು ಡಿಲೀಟ್‌ ಮಾಡಿದ್ದಾನೆ.

Video Top Stories