
FIR: ತಮಿಳುನಾಡಿನಲ್ಲಿ ಮಿಸ್ಸಿಂಗ್, ಬೆಂಗಳೂರಿನಲ್ಲಿ ಡೆಡ್ ಬಾಡಿ! ಅವಳನ್ನ ಪ್ರೀತಿಸಿದಕ್ಕೇ ಅವನನ್ನ ಕೊಂದುಬಿಟ್ಟರಾ?
ತಮಿಳುನಾಡಿನಿಂದ ಬಂದ ಕೂಲಿ ಕಾರ್ಮಿಕನ ಮೃತದೇಹ ಬೆಂಗಳೂರಿನ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಪೊಲೀಸರಿಗೆ ಆತನ ಜೇಬಿನಲ್ಲಿದ್ದ ಬಸ್ ಟಿಕೆಟ್ ಕೊಲೆ ರಹಸ್ಯವನ್ನು ಬೇಧಿಸಲು ಸಹಾಯ ಮಾಡಿತು.
ಬೆಂಗಳೂರು (ಮಾ.18): ಆತ ಕೂಲಿ ಕಾರ್ಮಿಕ.ತಮಿಳುನಾಡಿನಿಂದ ಬಂದು ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಂಡಿದ್ದ. ಗ್ರಾನೈಟ್ ಕಾರ್ಖಾನೆಯಲ್ಲಿ ಪಾಲಿಷ್ ಹಾಕೋ ಕೆಲಸ ಮಾಡಿ ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದ.
ಆದರೆ, ಆವತ್ತೊಂದು ದಿನ ಅವನ ಮೃತದೇಹ ರೈಲ್ವೇ ಹಳಿ ಮೇಲೆ ಬಿದ್ದಿತ್ತು. ಅವನ ದೇಹ ಎರಡು ತುಂಡಾಗಿತ್ತು. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರಿಗೆ ಆತನ ಮೈಮೇಲಿದ್ದ ಮಚ್ಚಿನೇಟುಗಳು ಕೊಲೆ ಅನ್ನಿಸುವಂತೆ ಮಾಡಿತ್ತು.
'ನಿನ್ನ ತಲೆಯಲ್ಲಿ ಕೂದಲು ಇಲ್ಲ' ಅಂತಾ ಪತಿಗೆ ಟಾರ್ಚರ್, ರೀಲ್ಸ್ ರಾಣಿ ಪತ್ನಿಯ ಶೋಕಿಗೆ ಗಂಡ ಬಲಿ!
ತಡಮಾಡದೇ ಪೊಲೀಸರು ತನಿಖೆಗೆ ಇಳಿದರು. ಆದರೆ, ಅವರ ಇನ್ವೆಸ್ಟಿಗೇಷನ್‌ಗೆ ಮೊದಲ ಲೀಡ್ ಕೊಟ್ಟಿದ್ದೇ ಆ ಕಾರ್ಮಿಕನ ಜೇಬಿನಲ್ಲಿದ್ದ ಬಸ್ ಟಿಕೆಟ್. ತಾನಾಯ್ತು ಅವನ ಪಾಡಾಯ್ತು ಅಂತಿದ್ದ ಆ ಅಮಾಯಕ ಹುಡುಗನನ್ನ ಕೊಂದಿದ್ಯಾರು..?