suvarna focus: ಮಕ್ಕಳ ಹೆಸರಲ್ಲಿ ಕೋಟಿ ಕೋಟಿ ಆಸ್ತಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಂಪತ್ತಿನ ಸೀಕ್ರೆಟ್..!

ಒಂದೇ ದಿನ ನಡೆದದ್ದು ಒಂದಲ್ಲ, ಎರಡಲ್ಲ, ಬರೋಬ್ಬರಿ 4 ಡೀಲ್..! ಮಕ್ಕಳ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಮಾಡಿಟ್ಟಿದ್ದ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಸಂಪತ್ತಿನ ಸೀಕ್ರೆಟ್ ಹೇಗೆಲ್ಲ ನಡೀತಿತ್ತು ಇಲ್ಲಿದೆ ನೋಡಿ ಮಾಹಿತಿ.

First Published Mar 5, 2023, 2:42 PM IST | Last Updated Mar 5, 2023, 2:42 PM IST

ಬೆಂಗಳೂರು (ಮಾ.05): ಒಂದೇ ದಿನ ನಡೆದದ್ದು ಒಂದಲ್ಲ, ಎರಡಲ್ಲ, ಬರೋಬ್ಬರಿ 4 ಡೀಲ್..! ಮಕ್ಕಳ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಮಾಡಿಟ್ಟಿದ್ದ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಸಂಪತ್ತಿನ ಸೀಕ್ರೆಟ್ ಹೇಗೆಲ್ಲ ನಡೀತಿತ್ತು ಎಂಬುದರ ಮಾಹಿತಿ ಇಲ್ಲಿದೆ ನೊಡಿ. ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಮಗ ಲೋಕಾಯುಕ್ತ ದಾಳಿಯ ವೇಲೆ ಸಿಕ್ಕಿಕೊಂಡಿದ್ದು, ಈ ಬರೋಬ್ಬರಿ 8 ಕೊಟಿ ರೂ. ನಗದು ಹಣದ ಸಮೇತ ಸಿಕ್ಕಿಕೊಂಡಿದ್ದಾರೆ. ಇನ್ನು ಇವರ ತಂದೆಯ ಮನೆಯ ಮೇಲೂ ದಾಳಿ ಮಾಡಿದ್ದು, ಸಾಕಷ್ಟು ಹಣ ಪತ್ತೆಯಾಗಿದೆ. ಇದಕ್ಕೆ ದಾಖಲೆ ಇಲ್ಲದ ಬಗ್ಗೆ ಪರಿಶೀಲನೆ ಮಾಡಿದ್ದಾರೆ. 

ಇನ್ನು ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಮನೆಯ ಮೇಲೆ ದಾಳಿ ಮಾಡಿದ ನಂತರ, ಲೋಕಾಯುಕ್ತ ತನಿಖೆಯಲ್ಲಿ ಶಾಸಕ ವಿರೂಪಾಕ್ಷಪ್ಪರ ಮತ್ತಷ್ಟು ಭ್ರಷ್ಟಾಚಾರ ಹೊರ ಬಿದ್ದಿದೆ. ಇನ್ನು KSDL ಅಧ್ಯಕ್ಷರಾಗಿ ನಿಗಮದಲ್ಲಿ ವಿರುಪಾಕ್ಷಪ್ಪ ಮಾಡುತ್ತಿದ್ದ ಗೋಲ್ಮಾಲ್ ಹೊರಬಿದ್ದಿದೆ. ಬರೋಬ್ಬರಿ 800 ಕೋಟಿಯ ಅಕ್ರಮದ ಕಂಪ್ಲೀಟ್ ರಿಪೋರ್ಟ್ ಹೊರಬಿದ್ದಿದೆ.