ಕಿರಾತಕ ಪ್ರೇಮಿಗಳು.. ಮದುವೆಯಾಗೋದಕ್ಕೂ ಮೊದಲೇ ಎಡವಿಬಿಟ್ಟರು, ಮಗು ಜನಿಸಿದ ಮೇಲೆ ಕೊಂದೇ ಬಿಟ್ಟರು!

ಪ್ರೀತಿಸಿ ಮದುವೆ ಆಗಬೇಕಿದ್ದ ಈ ಜೋಡಿ ಈಗ ಮರ್ಡರ್ ಕೇಸ್‍ನಲ್ಲಿ ಹಿಂಡಲಗಾ ಜೈಲು ಪಾಲಾಗಿದ್ದಾರೆ. ಅಷ್ಟಕ್ಕೂ ಅವರು ಕೊಂದಿದ್ದು ಯಾರನ್ನ ಗೊತ್ತಾ.? ಮದುವೆಗೂ ಮುನ್ನವೇ ಜನ್ಮ ನೀಡಿದ ತಮ್ಮದೇ ಮಗುವನ್ನ.

Govindaraj S  | Updated: Mar 27, 2025, 2:06 PM IST

ಅವರಿಬ್ಬರೂ ಅನ್ಯಧರ್ಮಿಯರು. ಒಂದೇ ಊರಿನ ಒಂದೇ ಓಣಿಯಲ್ಲಿದ್ದ ಅವರು ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೀಗೆ ಪ್ರೀತಿಸುತ್ತಿದ್ದ ಈ ಜೋಡಿ ಮಧ್ಯೆ ವಿವಾಹ ಪೂರ್ವವೇ ಹಲವು ಸಲ ದೈಹಿಕ ಸಂಪರ್ಕ ಕೂಡ ಆಗಿತ್ತು. ಪ್ರೀತಿಸಿ ಮದುವೆ ಆಗಬೇಕಿದ್ದ ಈ ಜೋಡಿ ಈಗ ಮರ್ಡರ್ ಕೇಸ್‍ನಲ್ಲಿ ಹಿಂಡಲಗಾ ಜೈಲು ಪಾಲಾಗಿದ್ದಾರೆ. ಅಷ್ಟಕ್ಕೂ ಅವರು ಕೊಂದಿದ್ದು ಯಾರನ್ನ ಗೊತ್ತಾ.? ಮದುವೆಗೂ ಮುನ್ನವೇ ಜನ್ಮ ನೀಡಿದ ತಮ್ಮದೇ ಮಗುವನ್ನ.. ಹೀಗೆ ತಮ್ಮದೇ ಹಸುಗೂಸನ್ನ ಕೊಂದ ಕಿರಾತಕ ಪ್ರೇಮಿಗಳಿಬ್ಬರ ಕಥೆಯೇ ಇವತ್ತಿನ ಎಫ್​​.ಐ.ಆರ್​​​. 

ಆಸ್ಪತ್ರೆಯಲ್ಲೂ ಪೊಲೀಸರಿಗೆ ಯಾವುದೇ ಮಾಹಿತಿ ಸಿಗೋದಿಲ್ಲ.. ಹಾಗಾದ್ರೆ ಈ ಮಗು ಬೇರೆ ಯಾವುದೇ ಗ್ರಾಮದ ತಾಯಿಯದ್ದಿರಬಹುದಾ ಅಂತ ಪೊಲೀಸರು ಯೋಚಿಸುತ್ತಿರುವಾಗ್ಲೇ ಅದೇ ಗ್ರಾಮದಿಂದ ಒಂದು ಸ್ಟ್ರಾಂಗ್​​ ಮಾಹಿತಿ ಪೊಲೀಸರ ಕೈಗೆ ಸೇರಿತ್ತು. ಹಾಗಾದ್ರೆ ಏನದು ಮಾಹಿತಿ..? ಮಹಾಬಳೇಶ ಹಾಗೂ ಸಿಮ್ರಾನ್ ಸಿಕ್ಕಿಹಾಕಿಕೊಂಡ್ರಾ..? ಮಗು ಜನಿಸಿದ ಮೇಲೆ ಸಿಮ್ರಾನ್​ ಮತ್ತು ಮಹಾಬಳೇಶ ಇಬ್ಬರೂ ಸೇರಿ ತಿಪ್ಪೆ ಗುಂಡಿಗೆ ಎಸೆದುಬಿಡ್ತಾರೆ. ನಾವು ಸೇಫ್​ ಆದ್ವಿ ಅಂತ ಎಲ್ರೂ ಅಂದುಕೊಂಡಿರುತ್ತಾರೆ.. ಇನ್ನೂ ಇವರ ಮೇಲೆ ಡೌಟ್​​ ಬರೋದಕ್ಕೂ ಅಲ್ಲಿ ಅವಕಾಶ ಇರಲಿಲ್ಲ ಕಾರಣ ಸಿಮ್ರಾನ್​ ಗರ್ಭಿಣಿಯಾಗಿದ್ದಿದ್ದು ಸ್ವತಹ ಆಕೆಯ ಕುಟುಂಬಕ್ಕೇ ಗೊತ್ತಿರಲಿಲ್ಲ.

ಆ ರೀತಿ ಆಕೆ ಮೇಂಟೇನ್​ ಮಅಡಿದ್ಲು... ತನಿಖೆ ನಡೆಸಿದ ಪೊಲೀಸರು ಮಾತ್ರ ಕೇಸ್​​ ಇತ್ಯರ್ಥ ಮಾಡಲೇ ಬೇಕು ಅಂತ ಪಣ ತೊಟ್ಟಿದ್ರು.. ಗ್ರಾಮದಲ್ಲಿರುವ ಪ್ರೇಮಿಗಳ ಮಾಹಿತಿ ಕಲೆಹಾಕೋದಕ್ಕೆ ಮುಂದಾದ್ರು.. ಆಗ ಬಂದ ಮೊದಲ ಹೆಸರೇ ಸಿಮ್ರಾನ್ ಮತ್ತು ಮಹಾಬಳೇಶ.. ಅವರನ್ನು ಕರೆತಂದು ವಿಚಾರಣೆ ಮಾಡಿದಾಗ ಎಲ್ಲವೂ ಹೊರಬಂದಿತ್ತು. ಹೌದು.. ಮಕ್ಕಳು ಎಲ್ಲಿಗೆ ಹೋಗ್ತಾರೆ.. ಏನ್​ ಮಾಡ್ತಾರೆ ಅಂತ ಒಂದು ಕಣ್ಣು ಇಡಲೇಬೇಕು.. ಇಲ್ಲಿ ಸಿಮ್ರನ್​​​ 9 ತಿಂಗಳ ಗರ್ಭಿಣಿಯಾದ್ರೂ ಯಾರಿಗೂ ಗೊತ್ತಾಗಿಲ್ಲ ಅಂದ್ರೆ ನಂಬೋದಕ್ಕೆ ಆಗುತ್ತಾ..? ವಯಸ್ಸಿಗೆ ಬಂದ ಮಕ್ಕಳು ಮನೆಯಲ್ಲಿದ್ದಾಗ ಪೋಷಕರು ಎಷ್ಟು ಎಚ್ಚರ ವಹಿಸಿದ್ರೂ ಸಾಲಲ್ಲ.

Read More...