ಅಪ್ಪನ ₹30 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!
ಟ್ಯಾಂಕ್ ರಿಪೇರಿಗೆಂದು ಹೋದ ವೃದ್ಧ ಆ್ಯಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದ್ದ. ಆದರೆ, ತನಿಖೆ ನಡೆಸಿದಾಗ ಅದು ಆ್ಯಕ್ಸಿಡೆಂಟ್ ಅಲ್ಲ, ಮರ್ಡರ್ ಅನ್ನೋದು ಬೆಳಕಿಗೆ ಬಂದಿತ್ತು. ಹಣಕ್ಕಾಗಿ ತಂದೆಯನ್ನೇ ಕೊಂದ ಮಗನ ಪಾಪದ ಕಥೆ ಇದು.
ಅವನು ಸ್ಟವ್ ರಿಪೇರಿ ಹಾಗೂ ಪ್ಲಾಸ್ಟಿಕ್ ರಿಪೇರಿ ಮಾಡುವವನು. ಮೊದಲ ಹೆಂಡತಿ ಸತ್ತ ಮೇಲೆ 2ನೇ ಮದುವೆಯಾಗಿದ್ದ. ಎರಡನೇ ಹೆಂಡತಿ ಮಕ್ಕಳೊಂದಿಗೆ ದೂರದ ಊರಿನಲ್ಲಿದ್ದರೆ ಈತ ಮಾತ್ರ ಮೊದಲ ಹೆಂಡತಿಯ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದನು. ಅದರೆ, ಆವತ್ತೊಂದು ದಿನ ಟ್ಯಾಂಕ್ ರಿಪೇರಿ ಇದೆ ಅಂತ ಹೋದವನು ಮಾರ್ಗ ಮಧ್ಯೆಯೇ ಆ್ಯಕ್ಸಿಡೆಂಟ್ ಆಗಿ ಮೃತಪಟ್ಟಿದ್ದನು.
ಪೊಲೀಸರೂ ಕೂಡ ಮೊದಲಿಗೆ ಆ್ಯಕ್ಸಿಡೆಂಟ್ ಕೇಸ್ ದಾಕಲಿಸಿಕೊಂಡಿದ್ದರು. ಆದರೆ, ಕೊಂಚ ಯೋಚಿಸಿದಾಗ ಅದು ಅಪಘಾತವಲ್ಲ ಬದಲಿಗೆ ಮರ್ಡರ್ ಅನ್ನೋದು ಗೊತ್ತಾಗಿತ್ತು. ಹಾಗಾದರೆ ಆ ವೃದ್ಧನನ್ನ ಕೊಂದಿದ್ಯಾರು..? ಅವನನ್ನ ಕೊಂದು ಆ್ಯಕ್ಸಿಡೆಂಟ್ನಂತೆ ಬಿಂಬಿಸೋದಕ್ಕೆ ಕಾರಣವೇನು..? ಒಬ್ಬ ಅಮಾಯಕನ ಬರ್ಬರ ಕೊಲೆ ಮತ್ತು ಪೊಲೀಸರ ರೋಚಕ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್..
ಮನೆಯಲ್ಲಿ ಟ್ಯಾಂಕ್ ರಿಪೇರಿ ಕೆಲಸ ಇದೆ ಅಂತ ಕಳಿಸಿದ್ದ ಮಗನೇ ಅಪ್ಪನ ಹೆಣ ಹಾಕಿದ್ದ. ಅಷ್ಟೇ ಅಲ್ಲ ತಂದೆಯ ಹೆಣದ ಮುಂದೆ ನಿಂತು ಕಣ್ಣೀರು ಹಾಕಿದ್ದನು. ಎಲ್ಲ ಮಕ್ಕಳಂತೆ ಆತ ಕೂಡ ತಂದೆಯನ್ನ ಪ್ರೀತಿಯಿಂದ ನೋಡಿಕೊಳ್ತಿದ್ದ. ಅದೇ ಪ್ರೀತಿಯಲ್ಲಿ ತಂದೆಗೆ ಒಂದು ಇನ್ಶುರೆನ್ಸ್ ಮಾಡಿಸಿದ್ದನು. ಆದ್ರೆ ಇತ್ತಿಚೆಗೆ ಆತ ತುಂಬಾನೇ ಸಾಲ ಮಾಡಿಕೊಂಡುಬಿಟ್ಟಿದ್ದ. ಸಾಲಗಾರರ ಕಾಟ ಹೆಚ್ಚಾಯ್ತು. ಏನಪ್ಪ ಮಾಡೋದು ಅಂತ ಯೋಚಿಸುತ್ತಿರುವಾಗ್ಲೇ ಅವನ ನೆನಪಿಗೆ ಬಂದಿದ್ದು ತಾನೇ ಮಾಡಿಸಿದ್ದ ಇನ್ಶುರೆನ್ಸ್.
ತಂದೆ ಸತ್ತರೆ ಅವರ ಹೆಸರಿಗೆ ಮಾಡಿಸಿದ್ದ 12 ಲಕ್ಷ ರೂ. ಬರುತ್ತದೆ. ಒಂದು ವೇಳೆ ಅಪಘಾತದಲ್ಲಿ ಸತ್ತರೆ 30 ಲಕ್ಷ ರೂ. ಬರುತ್ತದೆ ಎಂಬುದನ್ನು ತಿಳಿದ ಮಗ ತಂದೆಯನ್ನೇ ಮುಗಿಸಲು ತೀರ್ಮಾನಿಸಿದ್ದಾನೆ. ಅದರಂತೆ ಪಕ್ಕ ಪ್ಲಾನ್ ಮಾಡಿ ಆ್ಯಕ್ಸಿಡೆಂಟ್ ಆಗಿರುವಂತೆ ಬಿಂಬಿಸಿದ್ದಾನೆ. ಆದರೆ, ಅವನ ಬ್ಯಾಡ್ ಟೈಂ ತಂದೆಯ ಚಿತೆಗೆ ಬೆಂಕಿ ಇಡುವ ಮುನ್ನವೇ ಅವನು ಲಾಕ್ ಆಗಿದ್ದನು. ಕೇವಲ ಹಣಕ್ಕಾಗಿ ತನ್ನ ತಂದೆಯನ್ನೇ ಕೊಂದ ಮಗ ಇವತ್ತು ಜೈಲು ಸೇರಿದ್ದಾನೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿಯೇ ತೀರುತ್ತಾನೆ.. ಆದರೆ ಇಂಥ ಕೆಟ್ಟ ಮಕ್ಕಳಿಂದ ಸಮಾಜಕ್ಕೆ ಕೆಟ್ಟ ಸಂದೇಶಗಳು ಹೋಗುತ್ತವೆ.