ಅವಳು ಗೆಳತಿಯಲ್ಲ.. ಆದ್ರೂ ರಸಗುಲ್ಲಾ, ಮೈಸೂರ್ ಪಾಕ್ ಅಂತಾ ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಳಲ್ಲ!

ಬಿಕಾಂ ಪದವೀಧರೆ, ಹೈಫೈ ಕಾಂಟಾಕ್ಟ್ ಹೊಂದಿದ್ದ ಯುವತಿಯೊಬ್ಬಳು, ಪ್ರಭಾವಿಗಳ ನಂಬರ್‌ಗಳನ್ನು ಸ್ವೀಟ್‌ ಹೆಸರಿನಲ್ಲಿ ಸೇವ್‌ ಮಾಡಿಕೊಂಡು, ರಾಜ್ಯದ ಹಲವು ಜ್ಯುವೆಲರಿ ಮಾಲೀಕರಿಗೆ ಪಂಗನಾಮ ಹಾಕಿದ್ದಾಳೆ. ಮಾಜಿ ಸಚಿವ ವರ್ತೂರು ಪ್ರಕಾಶ್‌ ಜೊತೆಗಿನ ಆಕೆಯ ಸಂಪರ್ಕದ ಬಗ್ಗೆಯೂ ಅನುಮಾನಗಳು எழுದಿವೆ.

First Published Dec 25, 2024, 4:05 PM IST | Last Updated Dec 25, 2024, 4:05 PM IST

ಬೆಂಗಳೂರು (ಡಿ.25): ಆಕೆ ಚೆಂದುಳ್ಳಿ ಚೆಲುವೆ. ಓದಿದ್ದು ಬಿಕಾಂ. ಅಲ್ಲದೇ ಹೈಫೈ ಕಾಂಟಾಕ್ಟ್.. ಆಕೆ ಮೊಬೈಲ್ ಓಪನ್ ಮಾಡಿದ್ರೆ ಸಾಕು ಕಾಣಿಸ್ತಿತ್ತ ಇದ್ದಿದ್ದು ಮೈಸೂರು ಪಾಕ್, ಜಾಮೂನು, ರಸಗುಲ್ಲಾ ಇವೆ. ಅಂದ ಹಾಗೆ ಇದೆಲ್ಲಾ ಆಕೆ ಪ್ರಭಾವಿಗಳ ನಂಬರ್ ಅನ್ನು ಸೇವ್ ಮಾಡೋ ರೀತಿ.

ಈ ರೀತಿ ಮಾಡ್ತಿದ್ದವಳು ರಾಜ್ಯದ ಹಲವು ಜ್ಯುವೆಲರಿ ಮಾಲೀಕರಿಗೆ ಪಂಗನಾಮ ಹಾಕಿದ್ದಾಳೆ. ಆಕೆ ಮೊಬೈಲ್ ಓಪನ್ ಮಾಡಿದ್ರೆ ಸಾಕು ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತುಗಳೇ ತುಂಬಿ ತುಳುಕುತ್ತಿವೆ. ಇನ್ನೊಂದೆಡೆ, ಈಕೆ ನನ್ನ ಸ್ನೇಹಿತೆಯಲ್ಲ ಎಂದು ವರ್ತೂರು ಪ್ರಕಾಶ್‌ ಹೇಳಿದ್ದರೂ, ಇಲ್ಲಿಯವರೆಗೂ ಬಂದಿರುವ ಮಾಹಿತಿಗಳು ಹಾಗೆ ಹೇಳಿಲ್ಲ.

 

ಏನೇ ಚಿನ್ನ ನಿನ್ನ ಗುನ್ನಾ: ಶ್ವೇತಾ ಗೌಡ ಕೊಟ್ಟ ಹಣ, ಚಿನ್ನಾಭರಣ ವಾಪಸ್ ಕೊಟ್ಟ ವರ್ತೂರು ಪ್ರಕಾಶ್!

ಜ್ಯುವೆಲರ್ ಶಾಪ್ ಗಳನ್ನು ಟಾರ್ಗೆಟ್ ಮಾಡ್ಕೊಂಡು ಮೋಸದ ದಂಧೆಗೆ ಇಳಿದಿದ್ದ ಶ್ವೇತಾ ಗೌಡ ದೊಡ್ಡ ದೊಡ್ಡವರ ಪರಿಚಯ ಮಾಡ್ಕೊಂಡು ಐಷರಾಮಿ ಜೀವನ ಲೀಡ್ ಮಾಡ್ತಿದ್ದಳು. ಈಕೆಗೆ ಈ ರೀತಿನೂ ಮೋಸ ಮಾಡ್ಬೋದು ಅಂತ ಐಡಿಯಾ ಬಂದಿದ್ದೇ ರೋಚಕ. ಬಗಲಗುಂಟೆ ಬಳಿ ಇದ್ದ ಜ್ಯುವೆಲ್ಸ್ ಮಾಲೀಕನ ಖತರ್ನಾಕ್ ಐಡಿಯಾದಿಂದ ಶ್ವೇತಾಗೌಡ ಈ ರೀತಿ ಮೋಸದ ದಂಧೆಗೆ ಇಳಿದಿದ್ದಳು.