Asianet Suvarna News Asianet Suvarna News

ಇದು ನಿಜಕ್ಕೂ ದುರಂತ: ಬೆಂಗಳೂರಿನಲ್ಲಿ ಬಾಂಬೆ ಮಾದರಿಯ ವೇಶ್ಯಾವಾಟಿಕೆ

ಮುಂಬೈ ಮತ್ತು ಪುಣೆಯ ರೆಡ್ ಲೈಟ್ ಏರಿಯಾಗಳ ರೀತಿಯಲ್ಲಿ ಬೆಂಗಳೂರಿನಲ್ಲೂ ವೇಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದೆ.

Nov 19, 2022, 3:55 PM IST

ಬೆಂಗಳೂರು:ಬೆಂಗಳೂರಿನಲ್ಲಿ ಮಾಂಸದ ದಂಧೆ ನಡೆಯುತ್ತಿರುವ ಸಣ್ಣ ಸುಳಿವೂ ಕೂಡ ಯಾರಿಗೂ ಇರಲಿಲ್ಲ. ಆ ಕೋಣೆ ನೋಡಿದವರಿಗೂ ಡೌಟ್ ಬರುತ್ತಿರಲಿಲ್ಲ. ಆದ್ರೆ ಸಿಸಿಬಿ ಪಡೆ ಆ ಜಾಲವನ್ನು ಬಯಲಿಗೆಳೆದಿದೆ. ಸಣ್ಣ ರೂಮ್ ರಹಸ್ಯವನ್ನು ಹೊರಹಾಕಿದೆ.  ಬಾಂಬೆ ಮಾದರಿಯ ವೇಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದ್ದು, ಯಾರಿಗೂ ಸಣ್ಣ ಸುಳಿವು ಕೂಡ ಸಿಗದ ಹಾಗೆ ಖತರ್ನಾಕ್ ಐಡಿಯಾ ಮಾಡಿದ್ದ ಅದೊಂದು ಗ್ಯಾಂಗ್ ಮಾಂಸದಂಧೆಯನ್ನ ಸರಾಗವಾಗಿ ನಡೆಸುತ್ತಿತ್ತು. ಆದ್ರೆ ರುಟೀನ್ ರೈಡ್ ಮಾಡಿದ್ದ ಸಿಸಿಬಿ ಪೊಲೀಸರಿಗೆ ಅದೊಂದು ಲಾಡ್ಜ್‌ನಲ್ಲಿ ಅಚಾನಕ್ಕಾಗಿ ಸಿಕ್ಕ ಅದೊಂದು ಕಿಂಡಿ ದೊಡ್ಡ ಮಾಂಸದಂಧೆಯನ್ನು ಬಯಲಿಗೆಳೆದಿದೆ.

ನಿವೃತ್ತ ಯೋಧನನ್ನು ಬಲಿ ಪಡೆದ ರಸ್ತೆ ಗುಂಡಿಗಳನ್ನು ಸ್ವಂತ ಖರ್ಚಿನಲ್ಲಿ ಮುಚ್ಚಿದ ಜೆಡಿಎಸ್ ವಕ್ತಾರ