50 ಲಕ್ಷ ಕೊಟ್ರೆ ಎಲ್ಲಿಗೂ ಬೇಕಾದ್ರೆ ವರ್ಗಾವಣೆ: ಇದು ಸ್ಯಾಂಟ್ರೋ ರವಿಯ ಸೀಕ್ರೆಟ್‌ ಡೀಲ್‌ ಸ್ಟೋರಿ

ಸ್ಯಾಂಟ್ರೋ ರವಿಯ  ನಿಜಬಣ್ಣ ಬಯಲಾಗುತ್ತಿದ್ದು, ಆತನ ಸೀಕ್ರೆಟ್ ಡೀಲ್'ಗಳು ಇದೀಗ ಬಟಾಬಯಲಾಗಿವೆ.

Share this Video
  • FB
  • Linkdin
  • Whatsapp

ವರ್ಗಾವಣೆ ದಂಧೆಗೆ ಸ್ಯಾಂಟ್ರೋ ರವಿಯೇ ಮಾಸ್ಟರ್‌ ಎಂಬ ಸತ್ಯ ಬಯಲಾಗಿದೆ. 50 ಲಕ್ಷ ಕೊಟ್ರೆ ಎಲ್ಲಿಗೂ ಬೇಕಾದ್ರೇ ವರ್ಗಾವಣೆ ಮಾಡಲಾಗುತ್ತಿತ್ತಂತೆ. ಸ್ಯಾಂಟ್ರೋ ರವಿ ವರ್ಗಾವಣೆಯ ಡೀಲ್‌ ಬಿಚ್ಚಿಟ್ಟಿದ್ದು, ಸಿಎಂ ಹಾಗೂ ಡಿಜಿ ಕೂಡಾ ರವಿಗೆ ಗೊತ್ತಂತೆ. ರೌಡಿಶೀಟರ್‌ ರವಿ ಹಿಸ್ಟರಿ ಭಯಾನಕವಾಗಿದ್ದು, ವರ್ಗಾವಣೆ ದಂಧೆಯಲ್ಲಿ ದೊಡ್ಡ ಮಾಸ್ಟರ್‌ ಈ ಕಿಲಾಡಿ. ವರ್ಗಾವಣೆ ದಂಧೆಗೆ ಕುಮಾರಕೃಪವೇ ಹೆಡ್‌ ಆಫಿಸ್. ಪೊಲೀಸರಿಗೆ ಡೋಂಟ್‌ಕೇರ್‌ ಎನ್ನುತ್ತಿದ್ದ ಈತ ಆಡಿದ್ದೇ ಆಟ. ದೂರು ದಾಖಲಾಗಿ ಆರು ದಿನವಾದ್ರೂ ಖಾಕಿಗೆ ರವಿ ಸಿಕ್ಕಿಲ್ಲ.


Related Video