ಸಿಸಿಬಿ ಮುಂದೆ ಹಾಜರಾಗುತ್ತೇನೆ; ಸಂದೇಶ ಕಳಿಸಿದ ಐಂದ್ರಿತಾ!
ಸಿಸಿಬಿಯಿಂದ ನೋಟಿಸ್ ಬರುತ್ತಿದಂತೆ ಐಂದ್ರಿತಾ ಮತ್ತು ದಿಗಂತ್ ನಾಪತ್ತೆ/ ಟ್ವೀಟ್ ಮಾಡಿ ನಾವು ಸಿಸಿಬಿ ತನಿಖೆಗೆ ಎಲ್ಲ ಸಹಕಾರ ಕೊಡುತ್ತೇವೆ ಎಂದ ನಟಿ/ ಸೋಶಿಯಲ್ ಮೀಡಿಯಾದಲ್ಲಿ ವಿಷಯ ತಿಳಿಸಿದ ಮನಸಾರೆ ನಟಿ
ಬೆಂಗಳೂರು ( ಸೆ. 15) ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನ ಪ್ರಕರಣದಲ್ಲಿ ಇದೀಗ ನಟಿ ಐಂದ್ರಿತಾ ರೈ ಮತ್ತು ದಿಗಂತ್ ಗೆ ಸಿಸಿಬಿ ನೋಟಿಸ್ ನೀಡಿದೆ. ಸಿಸಿಬಿ ನೋಟಿಸ್ ನೀಡುತ್ತಿದ್ದಂತೆ ಸ್ಟಾರ್ ದಂಪತಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಸುದ್ದಿ ಒಂದು ಕಡೆ ಇದೆ.
ಐಂದ್ರಿತಾ-ದಿಗಂತ್‌ಗೂ ಸುತ್ತಿಕೊಂಡ ಡ್ರಗ್ಸ್ ಘಾಟು, ಆ ಗೆಳತನವೇ ಮುಳುವಾಯ್ತಾ?
ಆದರೆ ಟ್ವೀಟ್ ಮಾಡಿ ವಿಷಯ ತಿಳಿಸಿರುವ ಐಂದ್ರಿತಾ ಸಿಸಿಬಿ ಎದುರು ತನಿಖೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ. ನಟಿ ರಾಗಿಣಿ, ಸಂಜನಾ ನಂತರ ಡ್ರಗ್ಸ್ ಘಾಟು ಐಂದ್ರಿತಾಗೆ ಸುತ್ತಿಕೊಂಡಿದೆ.