ಎಸ್ಕೇಪ್ ಆಗಿ ಬೆಂಗಳೂರಿಗೆ ನಾನೇ ನಂಬರ್ 1 ಎನ್ನುತ್ತಿದ್ದ ರೌಡಿ ಸ್ಲಂ ಭರತ್ ಫಿನಿಶ್
ರೌಡಿ ಸ್ಲಂ ಭರತ್ ಪೊಲೀಸರ ಗುಂಡೇಟಿಗೆ ಬಲಿ/ ಎನ್ ಕೌಂಟರ್ ಗೆ ಬಲಿಯಾದ ರೌಡಿ ಶೀಟರ್/ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ ಪಾತಕಿ/ ಬೆಂಗಳೂರಿನ ಡಾನ್ ಪಟ್ಟಕ್ಕೆ ಹಾತೊರೆಯುತ್ತಿದ್ದ
ಬೆಂಗಳೂರು(ಫೆ. 27) ರೌಡಿ ಭರತ್ ಎನ್ ಕೌಂಟರ್ ನಲ್ಲಿ ಫಿನಿಶ್ ಆಗಿದ್ದಾನೆ. ಬೆಂಗಳೂರಿನ ನಂಬರ್ ಒನ್ ಸ್ಥಾನಕ್ಕೆ ಹಾತೊರೆಯುತ್ತಿದ್ದ ಸ್ಲಂ ಭರತ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಕಾರಿನಲ್ಲಿ ಬಂದ ಭರತ್ ನನ್ನು ಅಡ್ಡಗಟ್ಟಿದ ಪೊಲೀಸರು ಭರತ್ ನನ್ನು ಎನ್ ಕೌಂಟರ್ ಮಾಡಿದ್ದಾರೆ. ಕಾರಿಗೆ ಅಡ್ಡಲಾದ ಪೊಲೀಸರ ಮೇಲೆ ಭರತ್ ಗುಂಡಿನ ದಾಳಿ ಮಾಡುತ್ತಾನೆ. ಇದಾದ ಮೇಲೆ ಪೊಲೀಸರು ಆತನ ಮೇಲೆ ಫೈರ್ ಮಾಡುತ್ತಾರೆ.