ಬೆಳಿಗ್ಗೆ ಸೆಕ್ಯೂರಿಟಿ ಕೆಲಸ, ರಾತ್ರಿಯಾಗ್ತಿದ್ದಂತೆ ದರೋಡೆ; ಖತರ್ನಾಕ್ ಗ್ಯಾಂಗ್ ಅಂದರ್!
ಸಿಲಿಕಾನ್ ಸಿಟಿ ಮಂದಿಗೆ ಒಂದು ಕಡೆ ಕೊರೊನಾ ಹಾವಳಿ, ಇನ್ನೊಂದು ಕಡೆ ಕಳ್ಳರ ಹಾವಳಿ. ಚಿನ್ನದಂಗಡಿಗೆ ಕನ್ನ ಹಾಕಲು ನೇಪಾಳಿ ಗ್ಯಾಂಗ್‌ವೊಂದು ಪ್ಲಾನ್ ಮಾಡಿತ್ತು. ಕಿಂಡಿ ಕೊರೆದು ಒಬ್ಬೊಬ್ಬರಾಗಿಯೇ ಎಂಟ್ರಿ ಕೊಡುತ್ತಿದ್ದರು. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.
ಬೆಂಗಳೂರು (ಆ. 25): ಸಿಲಿಕಾನ್ ಸಿಟಿ ಮಂದಿಗೆ ಒಂದು ಕಡೆ ಕೊರೊನಾ ಹಾವಳಿ, ಇನ್ನೊಂದು ಕಡೆ ಕಳ್ಳರ ಹಾವಳಿ. ಚಿನ್ನದಂಗಡಿಗೆ ಕನ್ನ ಹಾಕಲು ನೇಪಾಳಿ ಗ್ಯಾಂಗ್‌ವೊಂದು ಪ್ಲಾನ್ ಮಾಡಿತ್ತು. ಕಿಂಡಿ ಕೊರೆದು ಒಬ್ಬೊಬ್ಬರಾಗಿಯೇ ಎಂಟ್ರಿ ಕೊಡುತ್ತಿದ್ದರು. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.
ಬೆಳಿಗ್ಗೆಯಾದರೆ ಸೆಕ್ಯುರಿಟಿ ಕೆಲಸ. ರಾತ್ರಿಯಾದರೆ ಕಳ್ಳತನಕ್ಕೆ ಇಳಿಯುತ್ತಿತ್ತು. ಬರೀ ಬೆಂಗಳೂರು ಮಾತ್ರವಲ್ಲ,, ಬೇರೆ ಬೇರೆ ರಾಜ್ಯಗಳಲ್ಲೂ ಕಳ್ಳತನ ಮಾಡುತ್ತಿದ್ದರು. ಕದ್ದ ಹಣವನ್ನೆಲ್ಲಾ ನೇಪಾಳಕ್ಕೆ ಸಾಗಿಸುತ್ತಿದ್ದರು. ಅಚ್ಚರಿ ಎಂದರೆ ಪೋನ್‌ನಲ್ಲಿ ಕರೆ ಮಾಡಿ ಮಾತನಾಡುತ್ತಿರಲಿಲ್ಲ. ಬದಲಿಗೆ ಫೇಸ್‌ಬುಕ್‌ನಲ್ಲಿ ಚಾಟ್ ಮಾಡಿಕೊಂಡು ಪ್ಲಾನ್ ಡಿಸ್ಕಶನ್ ಮಾಡುತ್ತಿದ್ದರು. ಕೊನೆಗೂ ಈ ಖತರ್ನಾಕ್ ಗ್ಯಾಂಗನ್ನು ಸಿಸಿಪಿ ಇನ್ಸ್‌ಪೆಕ್ಟರ್ ಕೇಶವಮೂರ್ತಿ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.