ಚಿತ್ತೂರು ಅಪಘಾತದಲ್ಲಿ ಇಬ್ಬರು ಪೊಲೀಸರು ಬಲಿ; ಭಾವುಕರಾದ ಡಿಸಿಪಿ ಭೀಮಾಶಂಕರ್ ಗುಳೇದ್
ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳ ಬೇಟೆಗೆ ಹೋಗಿದ್ದ ಪೊಲೀಸ್ ತಂಡದ ವಾಹನ ಆಂದ್ರಪ್ರದೇಶದ ಚಿತ್ತೂರು ಭೀಕರ ರಸ್ತೆ ಅಪಘಾತವಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಇನೋವಾ ಕಾರು ನಜ್ಜುಗುಜ್ಜಾಗಿದ್ದು ಘಟನೆಯಲ್ಲಿ ಶಿವಾಜಿ ನಗರ ಠಾಣಾ ಸಬ್ ಇನ್ಸ್ಪೆಕ್ಟರ್ ಅವಿನಾಶ್, ಹೆಚ್ ಸಿ, ಅನಿಲ್ ಮೂಲಿಕ್, ಕಾರು ಚಾಲಕ ಮಾಕ್ಸ್ ವೇಲ್ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ.
ಬೆಂಗಳೂರು (ಜು. 24): ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳ ಬೇಟೆಗೆ ಹೋಗಿದ್ದ ಪೊಲೀಸ್ ತಂಡದ ವಾಹನ ಆಂದ್ರಪ್ರದೇಶದ ಚಿತ್ತೂರು ಭೀಕರ ರಸ್ತೆ ಅಪಘಾತವಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಇನೋವಾ ಕಾರು ನಜ್ಜುಗುಜ್ಜಾಗಿದ್ದು ಘಟನೆಯಲ್ಲಿ ಶಿವಾಜಿ ನಗರ ಠಾಣಾ ಸಬ್ ಇನ್ಸ್ಪೆಕ್ಟರ್ ಅವಿನಾಶ್, ಹೆಚ್ ಸಿ, ಅನಿಲ್ ಮೂಲಿಕ್, ಕಾರು ಚಾಲಕ ಮಾಕ್ಸ್ ವೇಲ್ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ. ಮತ್ತೊಬ್ಬ ಸಬ್ ಇನ್ಸ್ಪೆಕ್ಟರ್ ದಿಕ್ಷೀತ್ ಹಾಗೂ ಕಾನ್ಸ್ ಟೇಬಲ್ ಶರಣ ಬಸಪ್ಪ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಚಿತ್ತೂರಿನ ಸೈನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ನಮ್ಮ ಸಿಬ್ಬಂದಿಗಳು ಕರ್ತವ್ಯ ನಿಮಿತ್ತ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ನಮ್ಮ ಇಲಾಖೆ ಅವರ ಕುಟುಂಬದ ಜೊತೆ ಇದ್ದೇವೆ. ಗಾಯಗೊಂಡವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ' ಎಂದು ಬೆಂಗಳೂರು ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದರು.