ನಟ ದರ್ಶನ್ ಗ್ಯಾಂಗ್‌ಗೆ ಮತ್ತೊಂದು ಸಂಕಷ್ಟ: ಮೂವರು ಸೇರಿ ಮಾಜಿ ಉಪಮೇಯರ್ ಮೋಹನ್ ರಾಜ್‌ಗೆ 2ನೇ ನೋಟಿಸ್

ನೋಟಿಸ್ ತಲುಪುತ್ತಿದ್ದಂತೆ ಕಾರ್ತಿಕ್ ಪುರೋಹಿತ್ ಎಸ್ಕೇಪ್
ಆರೋಪಿ  ಪ್ರದೋಷ್‌ಗೆ ಆಪ್ತನಾಗಿರೋ ಕಾರ್ತಿಕ್ ಪುರೋಹಿತ್
ರೇಣುಕಾಸ್ವಾಮಿ ಕೇಸ್ನಲ್ಲಿ ಮೂವರಿಗೆ ಶುರುವಾಗಿದೆ ನಡುಕ
 

Share this Video
  • FB
  • Linkdin
  • Whatsapp

ಜೈಲಿನಲ್ಲಿರುವ ನಟ ದರ್ಶನ್ ಗ್ಯಾಂಗ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ(Renukaswamy murder case) ಮೂವರಿಗೆ ನೋಟಿಸ್ ನೀಡಲಾಗಿದೆ. ಮಾಜಿ ಉಪಮೇಯರ್ ಮೋಹನ್ ರಾಜ್‌ಗೆ (Former Deputy Mayor Mohan Raj)2ನೇ ನೋಟಿಸ್ ನೀಡಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಗೆ ಹಾಜರಾಗುವಂತೆ‌ ನೋಟಿಸ್ ನೀಡಲಾಗಿದೆ. ನಟ ದರ್ಶನ್‌ಗೆ 40 ಲಕ್ಷ ಹಣ ನೀಡಿದ್ದ ಮೋಹನ್ ರಾಜ್. ಮೋಹನ್ ರಾಜ್ ರಿಂದ ದರ್ಶನ್ 40 ಲಕ್ಷ ಹಣವನ್ನು ದರ್ಶನ್‌ ಪಡೆದಿದ್ದರು. ಯಾವ ಉದ್ದೇಶಕ್ಕಾಗಿ ದರ್ಶನ್‌ಗೆ(Darshan) ಹಣ ನೀಡಿದ್ದಾರೆಂದು ಕೇಳಿ ನೋಟಿಸ್ ನೀಡಲಾಗಿದೆ. ಹಣದ ಬಗ್ಗೆ ಮಾಹಿತಿ ನೀಡುವಂತೆ ಮೋಹನ್‌ ರಾಜ್‌ಗೆ ಸೂಚನೆ ನೀಡಲಾಗಿದೆ. ಪ್ರಕರಣ ಸಂಬಂಧ ಪವಿತ್ರಾಗೌಡ ಸ್ನೇಹಿತೆ ಸಮತಾಗೂ ನೋಟಿಸ್ ನೀಡಲಾಗಿದೆ. ಪ್ರಕರಣದ ಆರೋಪಿಗೆ ಹಣಕಾಸಿನ ಸಹಾಯ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ಪ್ರಭಾವಿ ಶಾಸಕನ ಕಾರು ಚಾಲಕನಿಗೂ ನೋಟಿಸ್ ನೀಡಲಾಗಿದೆ. ಅಲ್ಲದೇ ಕಾರ್ತಿಕ್ ಪುರೋಹಿತ್ ಎಂಬ ಕಾರು ಚಾಲಕನಿಗೆ ನೋಟಿಸ್ ನೀಡಲಾಗಿದೆ.

ಇದನ್ನೂ ವೀಕ್ಷಿಸಿ: ಬಗೆದಷ್ಟೂ ಬಯಲಾಗ್ತಿದೆ ಮುಡಾ 50-50 ಹಗರಣ: ಸಿಎಂ ಪತ್ನಿ ಬಳಿಕ , ಆಪ್ತನಿಗೂ ಮುಡಾ ಸೈಟ್ ಹಂಚಿಕೆ!

Related Video