ಇಬ್ಬರು ಯುವಕರಿಂದ ಮಚ್ಚಿನಿಂದ ಕೊಚ್ಚಿ ಕೊಲೆ; ಬುದ್ಧಿಮಾತು ಹೇಳಿದವನ ಕಥೆಯೇ ಮುಕ್ತಾಯ!
ರಾಯಚೂರು ನಗರಭಾಗದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಕಲುಷಿತ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುಲಷಿತ ನೀರು ಕುಡಿದು 7 ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಹೀಗೆ ಕಲುಷಿತ ನೀರು ಸರಬರಾಜು ಆಗ್ತಿದ್ರಿಂದ ಅಲ್ಲಿನ ಜನರು ಶುದ್ಧ ನೀರಿಗಾಗಿ ಹುಡುಕಾಟದಲ್ಲಿದ್ದಾಗ ಮೈಬೂಬ್ ಅಲಿ ಎನ್ನುವವರ ಮನೆ ಮುಂದೆ ಇದ್ದ ನಲ್ಲಿ ನೀರು ವರವಾಗಿ ಸಿಗುತ್ತೆ.
ರಾಯಚೂರು ನಗರಭಾಗದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಕಲುಷಿತ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುಲಷಿತ ನೀರು ಕುಡಿದು 7 ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಹೀಗೆ ಕಲುಷಿತ ನೀರು ಸರಬರಾಜು ಆಗ್ತಿದ್ರಿಂದ ಅಲ್ಲಿನ ಜನರು ಶುದ್ಧ ನೀರಿಗಾಗಿ ಹುಡುಕಾಟದಲ್ಲಿದ್ದಾಗ ಮೈಬೂಬ್ ಅಲಿ ಎನ್ನುವವರ ಮನೆ ಮುಂದೆ ಇದ್ದ ನಲ್ಲಿ ನೀರು ವರವಾಗಿ ಸಿಗುತ್ತೆ. ಆ ಏರಿಯಾದ ಜನರೆಲ್ಲಾ ನೀರಿಗಾಗಿ ಮೈಬೂಬ್ ಮನೆ ಬಳಿ ಬರುತ್ತಿದ್ದರು, ಹಾಗೆ ಬಂದವರಲ್ಲಿ ಈ ಸೈಯದ್ ಅಲಿ ಹಾಗೂ ಶೇಕ್ ಅಮನ್ ಕೂಡ. ಇವರಿಬ್ಬರು ಬಂದು ತಮ್ಮ ಕೆಲಸವನ್ನ ತಾವು ಮಾಡಿಕೊಂಡು ಹೋಗಿದಿದ್ರೆ ಏನು ಆಗ್ತಿರಲಿಲ್ಲ. ನೀರಿಗೆ ಬಂದವರು ಮೈಬೂಬ್ ಮನೆಯ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿಬಿಟ್ಟಿದ್ರು.
ನೀರಿಗಾಗಿ ಮೈಬೂಬ್ ಮನೆ ಬಳಿ ಬರ್ತಿದ್ದ ಸೈಯದ್ ಅಲಿ ಮತ್ತು ಆತನ ಸ್ನೇಹಿತ, ಮೈಬೂಬ್ ಮನೆಯ ಹೆಣ್ಣು ಮಕ್ಕಳ ಮೇಲೂ ಕಣ್ಣು ಹಾಕಿಬಿಟ್ಟಿದ್ದ. ಈ ವಿಷ್ಯ ಗೊತ್ತಾದಾಗ ಮೈಬೂಬ್ ಸೈಯದ್‌ಗೆ ಚೆನ್ನಾಗಿ ಬಾರಿಸಿ ವಾರ್ನ್ ಮಾಡಿ ಕಳಿಸಿದ್ದ. ಒದೆ ತಿಂದ ಸೈಯದ್ ಅಲಿ ತನ್ನ ಸ್ನೇಹಿತ ಶೇಕ್ ಅಮನ್ ಜೊತೆ ಸೇರಿ ಮೈಬೂಬ್‌ನನ್ನು ಮುಗಿಸಲು ತೀರ್ಮಾನಿಸಿಬಿಡ್ತಾರೆ. ಮಕ್ಕಳನ್ನ ಶಾಲೆಗೆ ಬಿಡೋದು ಮತ್ತು ವಾಪಸ್ ಕರೆದುಕೊಂಡು ಹೋಗ್ತಿದ್ದ ಮೈಬೂಬ್‌ನ ಶಾಲೆ ಎದುರಲ್ಲೇ ಹತ್ಯೆ ಮಾಡುವನಿರ್ಧಾರಕ್ಕೆ ಬರ್ತಾರೆ. ಅದಕ್ಕಾಗಿ ಮಾರಕಾಸ್ತ್ರಗಳನ್ನೂ ರೆಡಿ ಮಾಡಿಕೊಳ್ತಾರೆ. ಮುಂದೇನಾಯ್ತು..?