ಪ್ರೀತ್ಸೆ ಪ್ರೀತ್ಸೆ ಎಂದು ಹುಡುಗಿ ಹಿಂದೆ ಬಿದ್ದ ಯುವಕ, ಊರನ್ನೇ ಬಿಟ್ಟ ಯುವತಿ!

ರಾಯಚೂರಿನ ಸಿಂಧನೂರಿನಲ್ಲಿ ಯುವಕನೊಬ್ಬ ಯುವತಿಯ ಮನೆ ಮುಂದೆ ಹೈಡ್ರಾಮಾ ಮಾಡಿದ್ದಾನೆ. ಯುವಕನ ಲವ್ ಕಾಟಕ್ಕೆ ಬೇಸತ್ತು ಯುವತಿ ಊರು ಬಿಟ್ಟಿದ್ದು, ಯುವಕ ಆಕೆಯ ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ.

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.3): ಪ್ರೀತ್ಸೆ ಪ್ರೀತ್ಸೆ ಎಂದು ಹುಡುಗಿ ಹಿಂದೆ ಬಿದ್ದ ಯುವಕನೊಬ್ಬ ಯುವತಿಯ ಮನೆ ಮಂದೆ ಬಂದು ಹೈಡ್ರಾಮಾ ಮಾಡಿದ್ದಾನೆ. ರಾಯಚೂರಿನ ಸಿಂಧನೂರಿನಲ್ಲಿ ಈ ಘಟನೆ ನಡೆದಿದೆ. ಯುವಕನ ಲವ್‌ ಕಾಟಕ್ಕೆ ಯುವತಿ ಊರನ್ನೇ ಬಿಟ್ಟಿದ್ದು, ಯುವಕ ಆಕೆಯ ಮನೆ ಮುಂದೆ ರಂಪಾಟ ಮಾಡಿದ್ದಾನೆ. ಹುಡುಗಿ ಅಪ್ಪನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಡಿಗ್ರಿ ವ್ಯಾಸಂಗ ಮಾಡುತ್ತಿರುವ ಯುವತಿಗೆ ವಸಂತ್‌ ಎನ್ನುವ ಹುಡುಗ ಕಿರುಕುಳ ನೀಡಿದ್ದಾನೆ. ಭಾನುವಾರ ಕುಡಿದು ಬಂದು ಆಕೆಯ ತಂದೆ ಸತೀಶ್‌ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video