ಡ್ರಗ್ಸ್ ಪೆಡ್ಲರ್‌ಗಳ ಜೊತೆ ಪ್ರಶಾಂತ್ ಫೋಟೋ ವೈರಲ್ ; ಹೌದು ಎಂದು ಒಪ್ಪಿಕೊಂಡ ಸಂಬರಗಿ.!
ಡ್ರಗ್ಸ್ ಪೆಡ್ಲರ್ ರಾಹುಲ್ ಜೊತೆ ಪ್ರಶಾಂತ್ ಸಂಬರಗಿ ಇರುವ ಫೋಟೋ ರಾರಾಜಿಸುತ್ತಿದೆ. ಡ್ರಗ್ಸ್ ಬಗ್ಗೆ ಭಾರೀ ಹೇಳಿಕೆ ಕೊಟ್ಟು, ನಟ-ನಟಿಯರ ಮೇಲೆ ಆರೋಪ ಮಾಡಿ, ಅದಕ್ಕೆ ಸಾಕ್ಷಿಗಳನ್ನು ನೀಡುತ್ತಿರುವ ಸಂಬರಗಿ ಸ್ವತಃ ಪೆಡ್ಲರ್‌ಗಳ ಜೊತೆ ಇರುವ ಫೋಟೋ ವೈರಲ್ ಆಗಿದೆ.
ಬೆಂಗಳೂರು (ಸೆ. 05): ಡ್ರಗ್ಸ್ ಪೆಡ್ಲರ್ ರಾಹುಲ್ ಜೊತೆ ಪ್ರಶಾಂತ್ ಸಂಬರಗಿ ಇರುವ ಫೋಟೋ ರಾರಾಜಿಸುತ್ತಿದೆ. ಡ್ರಗ್ಸ್ ಬಗ್ಗೆ ಭಾರೀ ಹೇಳಿಕೆ ಕೊಟ್ಟು, ನಟ-ನಟಿಯರ ಮೇಲೆ ಆರೋಪ ಮಾಡಿ, ಅದಕ್ಕೆ ಸಾಕ್ಷಿಗಳನ್ನು ನೀಡುತ್ತಿರುವ ಸಂಬರಗಿ ಸ್ವತಃ ಪೆಡ್ಲರ್‌ಗಳ ಜೊತೆ ಇರುವ ಫೋಟೋ ವೈರಲ್ ಆಗಿದೆ.
ಈ ಬಗ್ಗೆ ಸ್ವತಃ ಸಂಬರಗಿ ಸುವರ್ಣ ನ್ಯೂಸ್ ಜೊತೆ ಮಾತನಾಡಿ, ಇದು 2017 ರ ಫೋಟೋ. ಒಂದು ಬರ್ತಡೇ ಸಮಾರಂಭದಲ್ಲಿ ಭಾಗಿಯಾಗಿದ್ದೆ. ಆಗ ತೆಗೆಸಿಕೊಂಡ ಫೋಟೋ. ರಾಹುಲ್‌ಗೆ ಫೋಟೋ ತೆಗೆಸಿಕೊಳ್ಳುವ ಕ್ರೇಜ್. ನನ್ನ ಜೊತೆಯೂ ಫೋಟೋ ತೆಗೆಸಿಕೊಂಡ ಅಷ್ಟೇ. ನನಗೂ ಅವನಿಗೂ ಯಾವ ಸಂಬಂಧವೂ ಇಲ್ಲ. ಸುಮ್ಮನೆ ಫೋಟೋಗೆ ಪೋಸ್ ಕೊಟ್ಟಿದ್ದಷ್ಟೇ. ಈ ಸಂಬಂಧ ತನಿಖೆಗೂ ನಾನು ಸಹಕರಿಸುತ್ತೇನೆ' ಎಂದು ಸಂಬರಗಿ ಹೇಳಿದ್ದಾರೆ.
ರಾಗಿಣಿ ಮನೆಯಲ್ಲಿ ಸಿಸಿಬಿ ವಶಪಡಿಸಿಕೊಂಡ ಅರ್ಗಾನಿಕ್ ಸಿಗರೇಟ್‌ನಲ್ಲಿತ್ತಾ ಡ್ರಗ್?