ಡ್ರಗ್ ಆರೋಪಿ ವೀರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಯೂನಿಫಾರ್ಮ್..!

ಡ್ರಗ್ ಮಾಫಿಯಾದ ಪ್ರಮುಖವಾಗಿ ವೀರೆನ್ ಖನ್ನಾ ಮನೆಯಲ್ಲಿ ಪೊಲೀಸ್ ಯೂನಿಫಾರ್ಮ್ ಸಿಕ್ಕಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ. ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡುತ್ತೇವೆ' ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ಧಾರೆ. 

First Published Sep 8, 2020, 3:30 PM IST | Last Updated Sep 8, 2020, 3:47 PM IST

ಬೆಂಗಳೂರು (ಸೆ. 08): ಡ್ರಗ್ಸ್‌ ಮಾಫಿಯಾ ಬೆನ್ನತ್ತಿರುವ ಸಿಸಿಬಿಗೆ ಹೊಸ ಹೊಸ ಲಿಂಕ್‌ಗಳು ಸಿಗುತ್ತಾ ಹೋಗುತ್ತಿದೆ. ಡ್ರಗ್ ಮಾಫಿಯಾದ ಪ್ರಮುಖ ಆರೋಪಿ ವೀರೇನ್ ಖನ್ನಾ ಮನೆ ಮೇಲೆ ಇಂದು ಸಿಸಿಬಿ ದಾಳಿ ನಡೆಸಿದ್ದು, ಶೋಧ ಕಾರ್ಯದಲ್ಲಿ ಸಾಕಷ್ಟು ವಸ್ತುಗಳು ಸಿಕ್ಕಿವೆ. 

ಇತ್ತ ಸಂಜನಾ ಸಿಸಿಬಿ ವಶ, ಅತ್ತ ಪ್ರಭಾವಿ 'ಕೈ' ನಾಯಕನಿಗೆ ಶುರುವಾಯ್ತು ಢವಢವ..!

ಅದರಲ್ಲೂ ಪ್ರಮುಖವಾಗಿ ವೀರೆನ್ ಖನ್ನಾ ಮನೆಯಲ್ಲಿ ಪೊಲೀಸ್ ಯೂನಿಫಾರ್ಮ್ ಸಿಕ್ಕಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ. ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡುತ್ತೇವೆ' ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ಧಾರೆ.