Asianet Suvarna News Asianet Suvarna News

ಮಹಿಳೆ ಸೊಂಟ ಮುಟ್ಟಿದ ಪೊಲೀಸಪ್ಪನಿಗೆ ಬಿಸಿ ಬಿಸಿ ಕಜ್ಜಾಯ!

ಬಸ್‌ನಲ್ಲಿ ಪೊಲೀಸಪ್ಪನ ಪೋಲಿ ಆಟ| ಮಹಿಳೆ ಸೊಂಟ ಮುಟ್ಟಿದಾತನಿಗೆ ಬಿಸಿ ಬಿಸಿ ಕಜ್ಜಾಯ| ಆಟ ಬಿಗಡಾಯಿಸಿತೆಂದು ಅರಿತು ಬಸ್‌ನಿಂದ ಇಳಿದು ಪೊಲೀಸಪ್ಪ ಪರಾರಿ

ಬೆಂಗಳೂರು[ಫೆ.12]: ಬಸ್‌ನಲ್ಲಿ ಪೊಲೀಸಪ್ಪನೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಥಳಿತಕ್ಕೊಳಗಗಿದ್ದಾನೆ.

ಹೌದು ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ತೆರಳುತ್ತಿದ್ದ ಚಲಿಸುತ್ತಿದ್ದ ಬಸ್‌ನಲ್ಲಿ ಪೊಲೀಸಪ್ಪನೊಬ್ಬ ಮುಂದಿನ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆ ಸೊಂಟ ಮುಟ್ಟಿದ್ದಾನೆ. 

ಪೊಲೀಸಪ್ಪನ ಈ ವರ್ತನೆಯಿಂದ ಕುಪಿತಗೊಂಡ ಮಹಿಳೆ ಬೈದು, ಬಿಸಿ ಬಿಸಿ ಕಜ್ಜಾಯ ಕೊಟ್ಟಿದ್ದಾಳೆ. ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರೂ ಮಹಿಳೆ ಪರ ಧ್ವನಿ ಎತ್ತಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಪೊಲೀಸಪ್ಪ ಬಸ್‌ಬಿಂದ ಇಳಿದು ಪರಾರಿಯಾಗಿದ್ದಾನೆ.

ಫೆಬ್ರವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ