ಪೋಷಕರೇ ಹುಷಾರ್..! ಅಂಗಡಿಗಳಿಗೆ ಬಂದಿದೆ ನಶೆ ಏರಿಸಿ ಕಿಕ್‌ ಕೊಡೋ ಗಾಂಜಾ ಚಾಕೊಲೇಟ್

ಉತ್ತರಪ್ರದೇಶದಲ್ಲಿ ತಯಾರಿಸಿದ ಗಾಂಜಾ ಚಾಕೊಲೇಟ್ ರಾಯಚೂರಿನ ಎಲ್.ಬಿ.ಎಸ್ ನಗರ ಮತ್ತು ಇಂಡಸ್ಟ್ರಿಯಲ್ ಏರಿಯಾದಲ್ಲಿ ಹಲವು ದಿನಗಳಿಂದ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.  

Share this Video
  • FB
  • Linkdin
  • Whatsapp

ಪೋಷಕರೇ ಎಚ್ಚರ.. ಎಚ್ಚರ.. ನಿಮ್ಮ ಮಕ್ಕಳು ತಿನ್ನುವ ಚಾಕೊಲೇಟ್ ಕಡೆ ಗಮನ ಇರಲಿ. ನೀವು ಸ್ವಲ್ಪ ಯಾಮಾರಿದ್ರೆ ನಿಮ್ಮ ಮಕ್ಕಳು ಗಾಂಜಾ ಚಾಕೊಲೇಟ್ ತಿನ್ನಬಹುದು. ಹೌದು! ರಾಯಚೂರಿನ ಮನೆಯಲ್ಲಿ ಚಾಕೊಲೇಟ್ ಗಾಂಜಾ ಮಾರಾಟವಾಗುತ್ತಿವೆ. ಅದು ಕೂಡಾ 30, 50, 100ರೂ. ಗೆ ಸಿಗಲಿವೆ. 6 ಗ್ರಾಂ ತೂಕದ ಗಾಂಜಾವನ್ನು ಚಾಕೊಲೇಟ್‌ನಂತೆ ತಯಾರಿಸಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ತಯಾರಿಸಿದ ಗಾಂಜಾ ಚಾಕೊಲೇಟ್ ರಾಯಚೂರಿನ ಎಲ್.ಬಿ.ಎಸ್ ನಗರ ಮತ್ತು ಇಂಡಸ್ಟ್ರಿಯಲ್ ಏರಿಯಾದಲ್ಲಿ ಹಲವು ದಿನಗಳಿಂದ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನಲ್ಲೂ ಈ ಪ್ರಕರಣ ವರದಿಯಾಗಿತ್ತು.

Related Video