ಕೆಲಸಕ್ಕೆ ಹೋದವನು ನಾಪತ್ತೆ, ಅವನನ್ನ ಕೊಂದುಬಿಟ್ಟಿದ್ದ ಧಣಿ: 3 ವರ್ಷ ಹೋರಾಡಿದವಳಿಗೆ ಕೊನೆಗೂ ಸಿಗ್ತು ನ್ಯಾಯ!
ಕಾರ್ಪೆಂಟರ್ ಉದ್ಯೋಗಿಯನ್ನು ಹತ್ಯೆ ಮಾಡಿದ ಹಂತಕರಿಗೆ ಕೊನೆಗೂ ಕೋರ್ಟ್ ತಕ್ಕ ಶಿಕ್ಷೆ ವಿಧಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಅದೊಂದು ಬಡ ಕುಟುಂಬ. ಗಂಡ ಹೆಂಡತಿ ಮತ್ತು ಒಬ್ಬಳೇ ಮಗಳು. ಗಂಡ ಕಾರ್ಪೆಂಟರ್. ಹೆಂಡತಿ ಮನೆಯಲ್ಲೇ ಇರುತ್ತಿದ್ದಳು. ಮಗಳು ಕಾಲೇಜಿಗೆ ಹೋಗ್ತಿದ್ಲು. ಮನೆಯಲ್ಲಿ ಬಡತನವಿದ್ದರೂ ನೆಮ್ಮದಿಯಾಗಿ ಜೀವನ ಮಾಡ್ತಿದ್ದ ಕುಟುಂಬ ಅದು. ಆದ್ರೆ ಆವತ್ತೊಂದು ದಿನ ಕೆಲಸಕ್ಕೆ ಅಂತ ಹೋದ ಗಂಡ ಮಿಸ್ಸಿಂಗ್ ಆಗಿದ್ದ. ಕೆಲಸ ಮಾಡ್ತಿದ್ದ ಜಾಗಕ್ಕೆ ಹೋಗಿ ಕೇಳಿದ್ರೆ ಒಡೆಯ ನನಗೆ ಗೊತ್ತಿಲ್ಲ ಅಂದಿದ್ದ. ಬಳಿಕ ಎರಡು ದಿನಗಳ ಬಳಿಕ ಗಂಡ ಹೆಣವಾಗಿ ಸಿಕ್ಕಿದ್ದ.
ಇದೇ ಕೇಸ್ನ ತನಿಖೆಯನ್ನ ನಡೆಸಿದ್ದ ಪೊಲೀಸರು ತನಿಖೆ ನಡೆಸಿ ಹಂತಕರನ್ನ ಜೈಲಿಗೆ ಕಳಿಸಿದ್ರು. ಆದ್ರೆ ಇವತ್ತು ಇದೇ ಕೇಸ್ನ ಕೋರ್ಟ್ ತೀರ್ಪು ಹೊರಬಿದ್ದಿದೆ. ಆ ಹಂತಕರಿಗೆ ನ್ಯಾಯಾಲಯ ತಕ್ಕ ಶಿಕ್ಷೆ ಕೊಟ್ಟಿದೆ. ಅಷ್ಟಕ್ಕೂ ಆ ಕಾರ್ಪೆಂಟರ್ನನ್ನ ಕೊಂದಿದ್ಯಾರು? ಹಂತಕರಿಗೆ ಕೋರ್ಟ್ ಕೊಟ್ಟ ತೀರ್ಪು ಏನು? 3 ವರ್ಷ ಹಿಂದಿನ ಕೊಲೆ ಕೇಸ್ನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ