NIA Raid Mangaluru: ಐಸಿಸ್ ನಂಟು? ಮಾಜಿ ಶಾಸಕ ಇದಿನಬ್ಬ ಪುತ್ರನ ಸೊಸೆ ಬಂಧನ

* ಮಾಜಿ ಶಾಸಕ ಎಂ ಇದಿನಬ್ಬ ಮನೆಗೆ ಮತ್ತೆ NIA ದಾಳಿ.

* ಇದಿನಬ್ಬ ಮಗನ ಪತ್ನಿ ಮರಿಯಂನ ತೀವ್ರ ವಿಚಾರಣೆ ನಡೆಸಿದ ಅಧಿಕಾರಿಗಳು

* ಆಗಸ್ಟ್ ನಲ್ಲೇ ಒಮ್ಮೆ ದಾಳಿ ಮಾಡಿ ಇದಿನಬ್ಬರ ಕೊನೆಯ ಪುತ್ರ ನನ್ನ ಅರೆಸ್ಟ್ ಮಾಡಿದ್ದರು‌

* ಉಗ್ರ ಸಂಘಟನೆ ಐಸಿಸ್  ಜತೆ ನಂಟು ಹೊಂದಿರುವ ಆರೋಪ

First Published Jan 3, 2022, 5:19 PM IST | Last Updated Jan 3, 2022, 5:26 PM IST

ಮಂಗಳೂರು (ಜ. 03)  ಉಳ್ಳಾಲದ ಮಾಜಿ ಶಾಸಕ ದಿವಂಗತ ಬಿ. ಎಂ. ಇದಿನಬ್ಬ (B M Idinabba) ಅವರ ಪುತ್ರ, ಬಿ. ಎಂ. ಬಾಷಾ ಮನೆಗೆ ಎನ್ಐಎ (NIA) ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ. ಕಳೆದ ಆಗಸ್ಟ್  ವೇಳೆಯೂ ದಾಳಿ ನಡೆದಿತ್ತು.

ಐಸಿಸ್‌ ಉಗ್ರರ ನಂಟು ಶಂಕೆ: ಮಾಜಿ ಶಾಸಕನ ಮೊಮ್ಮಗ ಸೇರಿ 4 ಮಂದಿ ಅರೆಸ್ಟ್‌!

ಇದಿನಬ್ಬ ಮಗನ ಪತ್ನಿ ಮರಿಯಂನ ತೀವ್ರ ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಸೊಸೆ ದೀಪ್ತಿ ಅಲಿಯಾಸ್ ಮರಿಯಂಳನ್ನು ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಸಣ್ಣ ಮಗುವಿದ್ದ ಕಾರಣ ಕಳೆದ ಆಗಸ್ಟ್ ನಲ್ಲಿ ಬಂಧನ ಮಾಡಿರಲಿಲ್ಲ. ಐಸಿಸ್ (ISIS)ಜತೆ ನಂಟಿನ ಆರೋಪದಲ್ಲಿ ಈ ದಾಳಿಯಾಗಿದೆ.