'ಲಾಯರ್ ಕರೀತಿದ್ದಾರೆ 1 ಅವರ್ ಕೆಲಸ..' ಎಂದ್ಹೇಳಿ ಹೊರಟವನು ಸಲಿಂಗಕಾಮಕ್ಕೆ ಬಲಿಯಾದ!
ಒಂದು ವರ್ಷದ ಹಿಂದೆ ಮಿಸ್ಸಾದ ಹುಡುಗ, ಬಲಿಯಾಗಿದ್ದು ಸಲಿಂಗಕಾಮಕ್ಕೆ ಎನ್ನುವುದು ಗೊತ್ತಾಗಿದೆ. ಲಾಯರ್ ಆಫೀಸ್‌ನಲ್ಲಿ 1 ಅವರ್ ಕೆಲಸ ಅಂತಾ ಹೇಳಿ ಹೊರಟ ಹುಡುಗ ನಾಪತ್ತೆಯಾಗಿದ್ದ ಬಾಲಕನ ಮಿಸ್ಸಿಂಗ್ ಕೇಸ್‌ಗೆ ಸಿಕ್ಕಿದ್ದು ಮೇಜರ್ ಟ್ವಿಸ್ಟ್. ವಕೀಲನ ಬಾಯಿಬಿಡಿಸಲು ಪೊಲೀಸರು ಬ್ರೇನ್ ಮ್ಯಾಪಿಂಗ್ ಮಾಡಬೇಕಾಯಿತು.
ರಾಮನಗರ (ಜ.27): ಅದೊಂದು ಮಿಸ್ಸಿಂಗ್ ಕೇಸ್... ಕೆಲಸ ಮಾಡಿ ಬರ್ತೀನಿ ಅಂತ ಹೋದ ಮಗ ವಾಪಸ್ ಬರಲೇ ಇಲ್ಲ.. ಆದ್ರೆ ಆತ ಮನೆಯಿಂದ ಹೋಗುವಾಗ ಆತ ಎಲ್ಲಿಗೆ ಹೋಗ್ತೀನಿ ಅಂತ ಹೇಳಿದ್ದ. ಅವನು ಹೋಗಿದ್ದಿದ್ದು ಲಾಯರ್ ಆಫೀಸ್‌ಗೆ. ಯಾವಾಗ ಆ ಹುಡುಗ ಲಾಯರ್ ಆಫೀಸ್‌ಗೆ ಹೋಗ್ತೀನಿ ಅಂತಾ ಹೋದವನು ವಾಪಸ್ ಬರಲಿಲ್ವೋ ತಾಯಿ ಇರೋ ಬರೋ ಕಡೆಯಲೆಲ್ಲಾ ಹುಡುಕಾಡಿ ಕೊನೆಗೆ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರು.
ಆದರೆ, ತನಿಖೆ ಆರಂಭಿಸೋ ಪೊಲೀಸರಿಗೆ ಈ ಕೇಸ್ ಮಾಮೂಲಿ ಕೇಸ್‌ನಂತಾಗಿರಲಿಲ್ಲ. ಯಾಕೆಂದರೆ, ಇಲ್ಲಿ ಆರೋಪಿ ಒಬ್ಬ ಲಾಯರ್.. ಕ್ರಿಮಿನಲ್ ಲಾಯರ್. ಅವನನ್ನ ಟಚ್ ಮಾಡೋದಕ್ಕೂ ಸಾಧ್ಯವಿರಲಿಲ್ಲ. ಆದರೆ, ಇದೊಂದು ಮಿಸ್ಸಿಂಗ್ ಕೇಸ್ ಬರೊಬ್ಬರಿ ಒಂದು ವರ್ಷ ಪೊಲೀಸರನ್ನ ಇನ್ನಿಲ್ಲದಂತೆ ಆಟವಾಡಿಸಿಬಿಟ್ಟಿತ್ತು. ಆದರೆ, ಇತ್ತಿಚೆಗೆ ಬಂದ ಒಂದು ಟೆಕ್ನಾಲಜಿ ಈ ಕೇಸ್‌ಗೆ ಮೇಜರ್ ಟ್ವಿಸ್ಟ್ ನೀಡಿತ್ತು.
Ramanagara: ರಾಜ್ಯದಲ್ಲೇ ಮೊದಲ ಬ್ರೈನ್ ಮ್ಯಾಪಿಂಗ್ ಮೂಲಕ ಕೊಲೆ ರಹಸ್ಯ ಬಯಲು!
ಲಾಯರ್ ಕರೀತಿದ್ದಾರೆ 1 ಅವರ್ ಕೆಲಸ... ದುಡ್ಡು ಸಿಗುತ್ತೆ ಅಂತ ತನ್ನ ತಾತನಿಗೆ ಹೇಳಿ ಹೊರಟ ಶ್ರೇಯಸ್ ಮತ್ತೆ ವಾಪಸ್ ಬರಲೇ ಇಲ್ಲ. ಆದ್ರೆ ಶ್ರೇಯಸ್ ತಾಯಿಗೆ ಮತ್ತು ತಾತನಿಗೆ ಗೊತ್ತಿದ್ದಿದ್ದು ಒಂದೇ ಆತ ಹೇಳಿ ಹೋಗಿದ್ದ ಲಾಯರ್‌ನ ಹೆಸರು. ಆಹೆಸರು ಇಟ್ಟುಕೊಂಡೇ ಆವರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಅಲ್ಲಿ ಅನ್ ನ್ಯಾಚುರಲ್ ಸೆಕ್ಸ್ ಆಗಿತ್ತು.. ಆದ್ರೆ ಅದನ್ನ ಶಂಕರೇಗೌಡ ಒಪ್ಪಿಕೊಳ್ಳಲು ತಯಾರಿರಲಿಲ್ಲ.. ಹೀಗಾಗಿ ಪೊಲೀಸರು ಬೇರೆ ಪ್ಲಾನ್ ಮಾಡಿದ್ದರು. ಆಗತಾನೇ ಇಂಟ್ರಡ್ಯೂಸ್ ಆಗಿದ್ದ ಬ್ರೇನ್ ಮ್ಯಾಪಿಂಗ್‌ನ ಮೊರೆ ಹೋಗಿದ್ದರು.