ಮೂರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಕೊರಳೊಡ್ಡಿದ ತಾಯಿ: ಗಂಡನ 'ಆ' ಸಂಬಂಧಕ್ಕೆ ನಾಲ್ಕು ಜೀವಗಳು ಬಲಿ
ಊರಿಗೆ ಹೋಗಿ ಬಂದ ತಾಯಿಗೆ ಕಂಡಿದ್ದು ಮಗಳು ಮತ್ತು ಮೊಮ್ಮಕ್ಕಳ ಶವಗಳು. ಮೂರು ಮಕ್ಕಳಿಗೂ ವಿಷ ಉಣಿಸಿ ಕೌಸರ್ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಅದೊಂದು ಸುಂದರ ಕುಟುಂಬ. ಗಂಡ ಹೆಂಡತಿ ಮತ್ತು ಮೂರು ಮಕ್ಕಳು. ಆ ಕುಟುಂಬವನ್ನು ನೋಡಿ ಖುಷಿ ಪಟ್ಟವರು ಎಷ್ಟೋ, ಹೊಟ್ಟೆಕಿಚ್ಚು ಪಟ್ಟವರೆಷ್ಟೋ ಜನರು. ಮೊದಲೇ ಲವ್ ಮ್ಯಾರೇಜ್ ಅದು. ಹೀಗಾಗಿ ಗಂಡ-ಹೆಂಡತಿ ಮದುವೆಯಾಗಿ 10 ವರ್ಷವಾದ್ರೂ, ಅನ್ಯೋನ್ಯವಾಗಿದ್ರು. ಆದರೆ ಅವತ್ತೊಂದು ದಿನ ಗಂಡ ಮನೆಯಲ್ಲಿಲ್ಲದಿದ್ದಾಗ ಹೆಂಡತಿ ತನ್ನ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನೂ ನೇಣಿಗೆ ಶರಣಾಗಿಬಿಟ್ಟಿದ್ಲು. ಆಕೆ ಹಾಗೆ ಯಾಕೆ ಮಾಡಿದ್ಲು..? ಅಂಥಹ ಕಷ್ಟ ಅವಳಿಗೆ ಏನಿತ್ತು ಅನ್ನೋದು ಯಾರಿಗೂ ಮೊದಲಿಗೆ ಅರ್ಥವಾಗಿರಲಿಲ್ಲ. ಆದ್ರೆ ಯಾವಾಗ ಅಲ್ಲಿ ತವರು ಮನೆಯವರು ಬಂದ್ರೋ ಈ 4 ಸಾವುಗಳಿಗೆ ಕಾರಣ ಏನು ಅನ್ನೋದು ಗೊತ್ತಾಗಿತ್ತು. ಈ ಕರುಣಾಜನಕ ಕಥೆಗೆ ಆಕೆಯ ಗಂಡನೇ ವಿಲನ್ ಅನ್ನೋದು ಗೊತ್ತಾಗಿತ್ತು. ಹೀಗೆ ಸಕ್ಕರೆ ನಾಡಿನಲ್ಲಿ ನಡೆದ ಕಹಿ ಘಟನೆಯ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.