Asianet Suvarna News Asianet Suvarna News

ಬಾಲಿವುಡ್‌ ಡ್ರಗ್ಸ್ ಪಾರ್ಟಿ: ಕ್ರೂಸ್‌ಗೆ ಎಂಟ್ರಿಯಾದವರಿಗೆ 14 ಪುಟಗಳ 'ಕ್ರಯಾಕ್ ಬೈಬಲ್'!

Oct 3, 2021, 3:29 PM IST

ಮುಂಬೈ(ಆ.03) ಮುಂಬೈನಲ್ಲಿ ಎನ್‌ಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಸಮುದ್ರದ ಮಧ್ಯೆ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಎಂಜಾಯ್‌ ಮಾಡುತ್ತಿದ್ದವರನ್ನು ಬಲೆಗೆ ಹಾಕಿಕೊಂಡಿದೆ. ಈ ಮೂಲಕ ಬಾಲಿವುಡ್‌ ಸ್ಟಾರ್‌ ನಟನ ಮಗ ಸೇರಿ ಒಟ್ಟು ಹದಿನಾರು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 

ಇನ್ನು ಈ ಡ್ರಗ್ಸ್ ಪಾರ್ಟಿಗೆ ಸಂಬಂಧಿಸಿದಂತೆ ಸ್ಫೋಟಕ ಕತೆಯೊಂದು ಬಯಲಾಗಿದೆ. ಕ್ರೂಸ್‌ಗೆ ಬರುತ್ತಿದ್ದವರಿಗೆ ಇಲ್ಲಿನ ಸಿಬ್ಬಂದಿ 14 ಪುಟಗಳ ಕ್ರಯಾಕ್‌ ಬೈಬಲ್ ನೀಡುತ್ತಿದ್ದರು. ಇದರಲ್ಲಿ ಈ ಹಡಗಿನಲ್ಲಿ ಏನು ಮಾಡಬೇಕು? ಮಾಡಬಾರದು ಎಂಬ ಸೂಚನೆ ನೀಡಲಾಗುತ್ತಿತ್ತು. ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗುವವರಿಗೆಂದೇ ಇದನ್ನು ಸಿದ್ಧಪಡಿಸಿತ್ತೆನ್ನಲಾಗಿದೆ. 

Video Top Stories