Mangaluru Auto Blast: ಗೃಹ ಸಚಿವ ಹಾಗೂ ಡಿಜಿಪಿಯ ಫೇಕ್ ಆಧಾರ್-ಐಡಿ ಕಾರ್ಡ್ ಮಾಡಿದ ಶಾರೀಕ್
Mangaluru Auto Blast ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಮಾಹಿತಿಗಳು ಲಭ್ಯವಾಗಿವೆ.
ಬಾಂಬರ್ ಮೊಹಮ್ಮದ್ ಶಾರೀಕ್, ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ ಮಾಡಿರುವ ಮಾಹಿತಿ ಲಭ್ಯವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಫೇಕ್ ಆಧಾರ್ ಕಾರ್ಡ್ ಮಾಡಿದ್ದು, ಆಧಾರ್ ಕಾರ್ಡ್'ನಲ್ಲಿ ಫೋಟೋ ಮಾತ್ರ ಆರಗ ಜ್ಞಾನೇಂದ್ರನದ್ದು, ಆದರೆ ಪಕ್ಕದಲ್ಲೇ ಇರುವ ಹೆಸರು ಮಾತ್ರ ಉಗ್ರ ಮೊಹಮ್ಮದ್ ಶಾರೀಕ್‌ದ್ದು. ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೆಶಕರ ಹೆಸರಿನಲ್ಲೂ ಫೇಕ್ ಐಡಿ ಮಾಡಿದ್ದು, ಪ್ರವೀಣ್ ಸೂದ್ ಫೋಟೋ ಜೊತೆಗೆ ಉಗ್ರ ಶಾರಿಕ್ ಹೆಸರು ಇದೆ. ಆಧಾರ್, ವೋಟರ್ ಐಡಿ, ಪ್ಯಾನ್ ಕಾರ್ಡ್'ನಲ್ಲೂ ನಕಲಿ ಫೋಟೋ, ಐಡಿ ಕಾರ್ಡ್ ಬಳಸಿ ಏನೂ ಬೇಕಾದರೂ ಮಾಡಬಹುದು. ನಿಮ್ಮ ಫೋಟೋ ಬೇರೆಯವರಿಗೆ ಸಿಗದಂತೆ ಎಚ್ಚರವಾಗಿರಿ. ಸ್ವಲ್ಪ ಎಚ್ಚರ ತಪ್ಪಿದ್ರೂ ನೀವು ಜೈಲೂ ಸೇರಬೇಕಾಗುತ್ತದೆ ಎಚ್ಚರ.