Mangalore Blast: ಪೆನ್ ಡ್ರೈವ್ ಬಿಚ್ಚಿಡ್ತು 'ಸ್ಫೋಟ'ಕ ಸತ್ಯ: ಇದು ಶಾರಿಕ್ 'ಬಾಂಬ್' ಬ್ಲಾಸ್ಟ್ ಕಹಾನಿ
ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಶಾರೀಕ್ ಹೇಗೆ ತಯಾರಿ ನಡೆಸಿದ್ದ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಶಂಕಿತ ಉಗ್ರರ ಕರಾಳ ಮುಖ ಪೆನ್ ಡ್ರೈವ್ ಮೂಲಕ ಹೊರ ಬಿದ್ದಿದೆ. ಟ್ರಯಲ್ ಬ್ಲಾಸ್ಟ್'ಗೂ ಮೊದಲು ರೋಬೋಟಿಕ್ ಆಕ್ಷನ್ ನಡೆಸಿದ್ದು, ಆರು ತಿಂಗಳು ಆನ್‌ಲೈನ್ ಕೋರ್ಸ್ ಮಾಡಿದ್ದ ಮಾಝ್ ಹಾಗೂ ಯಾಸಿನ್ ರೋಬೋಟಿಕ್ ಆಕ್ಷನ್ ಮೂಲಕ ಬ್ಲಾಸ್ಟ್ ಬಗ್ಗೆ ಮಾಹಿತಿ ತಿಳಿದಿದ್ದರು. ಶಿವಮೊಗ್ಗದಲ್ಲಿ ಟ್ರಯಲ್ ಬಾಂಬ್ ಬ್ಲಾಸ್ಟ್'ಗೂ ಮುನ್ನ ಪ್ರಾಕ್ಟಿಕಲ್ ರೋಬೋಟಿಕ್ ಆಕ್ಷನ್ ಸಕ್ಸಸ್ ಬಳಿಕ ಟ್ರಯಲ್ ಬ್ಲಾಸ್ಟ್ ಮಾಡಿದ್ದರು. ವಿಡಿಯೋ ಸಮೇತ ದೃಶ್ಯಗಳನ್ನು ಕ್ರಿಯೇಟ್ ಮಾಡಿದ್ದ ಶಂಕಿತ ಉಗ್ರರು, ಕೋರ್ಸ್‌ಗಳ ಸುಳಿವು ಸಿಗದಂತೆ ಮಾಹಿತಿಗಳನ್ನು ಪೆನ್ ಡ್ರೈವ್‌ಗೆ ಹಾಕಿದ್ದರು.