ಅಣ್ಣ-ತಂಗಿ ಮನಸ್ಸಲ್ಲಿ ಮೂಡಿತ್ತು ಪ್ರೇಮ: ಪ್ರೀತಿ ಫಲಿಸಲ್ಲ ಎಂದು 'ಜೋಡಿ' ಆತ್ಮಹತ್ಯೆ

ಧಾರವಾಡದ ನವಲಗುಂದದ ಅಶೋಕ ಲಾಡ್ಜ್'ನಲ್ಲಿ ಜೋಡಿಯ ಶವವೊಂದು ಫ್ಯಾನಿನಲ್ಲಿ ನೇತಾಡ್ತಿತ್ತು. ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಅಣ್ಣ-ತಂಗಿ.

Share this Video
  • FB
  • Linkdin
  • Whatsapp

ಧಾರವಾಡ: ವರಸೆಯಲ್ಲಿ ಅಣ್ಣ ತಂಗಿ ಆಗಿದ್ದ ದೀಪಾ ಮತ್ತೆ ಕುಮಾರ್ ಮಧ್ಯೆ ಮೂಡಿದ್ದ ಪ್ರೀತಿಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿಬಿಟ್ಟಿತ್ತು. ನವಲಗುಂದದ ಬೆಳವಟಿಗೆ ಗ್ರಾಮದ ಕುಮಾರ ಕೆಲಸ ಕಾರ್ಯವಿಲ್ಲದೆ ಅಲೆದಾಡುತ್ತಿದ್ದ, ಈ ವೇಳೆ ತನ್ನ ಚಿಕ್ಕಮ್ಮನ ಮಗಳು ದೀಪಾಳ ಮೇಲೆ ಪ್ರೀತಿ ಮೂಡಿರುತ್ತೆ. ಪ್ರೀತಿ ಏನೋ ಮಾಡಿದ್ದೆ ಆದ್ರೆ ಜೀವನಕ್ಕೆ ಏನ್ ಮಾಡೋದು ಅಂತ ಕುಮಾರನಿಗೆ ಚಿಂತೆ ಶುರು ಆಗಿಬಿಡುತ್ತೆ. ಆತನಿಗೆ ಎಲ್ಲೂ ಕೆಲಸ ಸಿಗೋದೆ ಇಲ್ಲ. ಇತ್ತ ತಾನು ಪ್ರೀತಿಸಿದ ಹುಡುಗಿಯನ್ನು ಬಿಡದ ಪರಿಸ್ಥಿತಿ. ಈ ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ ಸಿಗಲ್ಲ ಅಂತ ಇಬ್ಬರಿಗೂ ಗೊತ್ತಿತ್ತು. ಹೀಗಾಗಿ ಈ ಜೋಡಿ ಸಾಯುವ ನಿರ್ಧಾರಕ್ಕೆ ಬಂದು, ನೇಣಿಗೆ ಕೊರಳೊಡ್ಡಿದ್ದಾರೆ.

ಆನೇಕಲ್ ಭೀಕರ ಅಪಘಾತ: ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದಿದ್ದ ಅಸ್ಸಾಂ ಮೂಲದ ಮೂವರ ದುರ್ಮರಣ

Related Video