
ಬಾಗಲಕೋಟೆ: ಲಾರಿ -ಬೈಕ್ ಡಿಕ್ಕಿ, ಮಗಳ ಮದುವೆ ಸಂಭ್ರಮದಲ್ಲಿದ್ದ ತಂದೆಯ ಸಾವು
ಲಾರಿ ಮತ್ತು ಬೈಕ್ ಮಧ್ಯೆ ಡಿಕ್ಕಿಯಾಗಿ (Accident) ಮಗಳ ಮದುವೆ ಸಂಭ್ರಮದಲ್ಲಿದ್ದ ತಂದೆಯ ಸಾವನ್ನಪ್ಪಿರುವ ದಾರುಣ ಘಟನೆ ಹುನಗುಂದ (Hunagunda) ತಾಲೂಕಿನ ಅಮೀನಗಡದಲ್ಲಿ ನಡೆದಿದೆ.
ಬಾಗಲಕೋಟೆ (ಮೇ.16): ಲಾರಿ ಮತ್ತು ಬೈಕ್ ಮಧ್ಯೆ ಡಿಕ್ಕಿಯಾಗಿ (Accident) ಮಗಳ ಮದುವೆ ಸಂಭ್ರಮದಲ್ಲಿದ್ದ ತಂದೆಯ ಸಾವನ್ನಪ್ಪಿರುವ ದಾರುಣ ಘಟನೆ ಹುನಗುಂದ (Hunagunda) ತಾಲೂಕಿನ ಅಮೀನಗಡದಲ್ಲಿ ನಡೆದಿದೆ. ಸಂಬಂಧಿಗಳಿಗೆ ಮಗಳ (Wedding) ಮದುವೆ ಲಗ್ನ ಪತ್ರ ನೀಡಿ ಮರಳುತ್ತಿದ್ದ ವೇಳೆ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗೊರಜನಾಳ ಗ್ರಾಮದ ಜಗದೀಶಗೌಡ (50) ಮೃತ ದುದೈ೯ವಿ. ಸ್ಥಳಕ್ಕೆ ಅಮೀನಗಡ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.