)
ಟಿಕೆಟ್ ಟು ಪರಲೋಕ! ಲಂಡನ್ ಕನಸು ಕಂಡ ಪ್ರೊಫೆಸರ್‌ನ ಹೃದಯವಿದ್ರಾವಕ ಅಂತ್ಯ
ಲಂಡನ್‌ಗೆ ಹೋಗುವ ಕನಸು ಕಂಡಿದ್ದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರನ್ನು ಅವರ ಸ್ನೇಹಿತನೇ ಕೊಲೆ ಮಾಡಿ ಬಾವಿಯಲ್ಲಿ ಎಸೆದ ಘಟನೆ ಬೆಳಕಿಗೆ ಬಂದಿದೆ. ಫ್ಲೈಟ್ ಟಿಕೆಟ್ ವ್ಯವಸ್ಥೆ ಮಾಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾನೆ.
ಬೆಂಗಳೂರು (ಜು.02): ಲಂಡನ್ ಫ್ಲೈಟ್ ಹತ್ತುವ ಕನಸು ಕಂಡಿದ್ದ ಒಬ್ಬ ಸಹಜೀವಿ ಅಸಿಸ್ಟೆಂಟ್ ಪ್ರೊಫೆಸರ್‌ನ ಭವಿಷ್ಯವನ್ನು ಸ್ನೇಹಿತನೆ ಕಿತ್ತುಕೊಂಡ ದುಃಖಾಂತ ಘಟನೆ ಒಂದು ಬೆಳಕಿಗೆ ಬಂದಿದೆ. ಕೇವಲ ವಿದೇಶಕ್ಕೆ ಹೋಗಿ ಚೆನ್ನಾಗಿ ಬದುಕಬೇಕೆಂಬ ಕನಸಿನ ಬೆನ್ನಟ್ಟಿದ ಪ್ರೊಫೆಸರ್, ಫ್ಲೈಟ್ ಹತ್ತುವ ಮುನ್ನವೇ ಬಾವಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ.
ಅಸ್ಸಿಸ್ಟೆಂಟ್ ಪ್ರೊಫೆಸರ್ ರಾಮಾಂಜಿ, ಕೃಷಿ ವಿಭಾಗದಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ತಂದೆ-ತಾಯಿ ಇಲ್ಲದ ಏಕಾಂಗಿಯಾಗಿದ್ದ ಅವರು, ವಿದೇಶದಲ್ಲಿ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಆ ಕನಸಿಗೆ ಭರವಸೆ ನೀಡಿದವನು ಅವರ ಹತ್ತಿರದ ಗೆಳೆಯ ಸುಧಾಕರ್. ಶಬರಿಮಲೆಗೆ ಹೋಗುವ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿದ್ದು, ನಂತರ ಅದು ಸ್ನೇಹಕ್ಕೆ ಪರಿವರ್ತಿತವಾಗಿತ್ತು. ಸುಧಾಕರ್ ಈಗಾಗಲೇ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವಿದೇಶದಲ್ಲಿ ಉದ್ಯೋಗದ ಸಾಧ್ಯತೆ ಬಗ್ಗೆ ಮಾತನಾಡುತ್ತಿದ್ದನು. ರಾಮಾಂಜಿಗೆ ವಿದೇಶದಲ್ಲಿ ಲಕ್ಷ ಲಕ್ಷ ದುಡಿಯಬಹುದೆಂಬ ಆಸೆ ತೋರಿಸಿದನು. ಜೊತೆಗೆ ರಾಮಾಂಜಿಯಿಂದ ಪಾಸ್‌ಪೋರ್ಟ್, ಫ್ಲೈಟ್ ಟಿಕೆಟ್ ಎಲ್ಲ ವ್ಯವಸ್ಥೆಗಳ ಖರ್ಚಿಗಾಗಿ ಸುಧಾಕರ್ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದನು.
ಮೋಸದ ತಿರುವು:
ದಿನ ಕಳೆದಂತೆ ಸುಧಾಕರ್ ತನ್ನ ಸ್ನೇಹಿತನಿಗೆ ದೂರವಾಗತೊಡಗಿದ. ದುಡ್ಡು ಮರಳಿ ಕೊಡುವಂತೆ ಒತ್ತಾಯಿಸಿದಾಗ, 'ಫ್ಲೈಟ್ ಟಿಕೆಟ್ ಆಗಿದೆ, ನಾನೇ ಏರ್‌ಪೋರ್ಟ್‌ಗೆ ಡ್ರಾಪ್ ಮಾಡ್ತೀನಿ' ಎಂದು ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾನೆ. ಅದಾದ ಮೇಲೆ ರಾಮಾಂಜಿ ಕಾಣೆಯಾಗುತ್ತಾನೆ. ಮೂರು ದಿನಗಳ ನಂತರ, ಪಕ್ಕದ ಊರಿನ ಬಾವಿಯೊಂದರಲ್ಲಿ ಅವರ ಶವ ಪತ್ತೆಯಾಗುತ್ತದೆ. ಪ್ರಾರಂಭದಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದ್ದರೂ, ನಂತರ ಶಂಕಿತವಾಗಿ ತನಿಖೆ ನಡೆಸಿದಾಗ ಸುಧಾಕರ್‌ನ ನಕಲಿ ಆಟ ಬಹಿರಂಗವಾಗುತ್ತದೆ. ರಾಮಾಂಜಿ ಲಂಡನ್‌ಗೆ ಹೋಗಲೇ ಇಲ್ಲ ಎಂಬುದು ದೃಢವಾಗುತ್ತದೆ. ಪೊಲೀಸರು ಸುಧಾಕರ್ ಬಂಧಿಸಿದ್ದಾರೆ.