Asianet Suvarna News Asianet Suvarna News

KSRTC ಬಸ್‌ನಲ್ಲೇ ಕಂಡಕ್ಟರ್  ‘ಕೈ’ ಕಿತಾಪತಿ, ಪೋಲಿಯಾಟಕ್ಕೆ ತಕ್ಕ ಶಾಸ್ತಿ!

ಸಾರಿಗೆ ಬಸ್ ನಲ್ಲಿ ಕಂಡಕ್ಟರ್ ಕಿತಾಪತಿ/ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ನಿರ್ವಾಹಕ/ ಇದಾದ ಮೇಲೆ ಯುವತಿ ಪ್ರಿಯಕರನಿಂದ ಕಂಡಕ್ಟರ್ ಮೇಲೆ ಹಲ್ಲೆ/ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು/

ಬೆಂಗಳೂರು[ಫೆ. 17]  ಕೆಎಸ್ ಆರ್ ಟಿಸಿ ಬಸ್ ನಲ್ಲೇ ಕಂಡಕ್ಟರ್ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನ ಮೇರೆ ಸುಬ್ರಮಣ್ಯ ನಗರ ಪೊಲೀಸರಿಂದ ಆರೋಪಿ  ಶಿಶುಹರಿ ಶಾಲುರ್ ಎಂಬ ನಿರ್ವಾಹಕನನ್ನು ಬಂಧಿಸಿಸ್ದಾರೆ. ಫೆ. 15ರಂದು ಬಸ್ ನಲ್ಲಿ ಸಂತ್ರಸ್ತೆ ತೆರಳುತ್ತಿದ್ದಳು. ಬಸ್ ನಲ್ಲಿ ಪಕ್ಕವೇ ಕುಳಿತಿದ್ದ ಕಂಡಕ್ಟರ್ ಕಿತಾಪತಿ ಮಾಡಿದ್ದ.

ಬಸ್‌ ನಲ್ಲಿ ಸ್ಟೂಡೆಂಟ್ಸ್ ರೋಮಾನ್ಸ್.. ಕಿಸ್ಸಿಂಗ್..ಆಮೇಲೆ

ವಿಚಾರವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಸಂತ್ರಸ್ತೆ ವಿಚಾರವನ್ನು ಪ್ರೊಯಕರನಿಗೂ ತಿಳಿಸಿದ್ದಳು.ವಿಚಾರ ಗೊತ್ತಾದ ಮೇಲೆ ಕಂಡಕ್ಟರ್ ಗೆ ಪ್ರಿಯಕರ ಮತ್ತು ಆತನ ಸ್ನೇಹಿತರು ಗೂಸಾ ನೀಡಿದ್ದರು.

ತನ್ನ ಮೇಲೆ ಹಲ್ಲೆಯಾಗಿದೆ ಎಂದು ಮೊದಲಿಗೆ ಕಂಡಕ್ಟರ್ ಸಂತ್ರಸ್ತೆಯ ಪ್ರಿಯಕರ ಚೇತನ್ ಹಾಗೂ ಆತನ ಗೆಳೆಯ ರ ವಿರುದ್ಧ ದೂರು ನೀಡಿದ್ದ. ಇದೇ ವೇಳೆ ಪೊಲೀಸ್ ಸ್ಟೇಶನ್ ಗೆ ಬಂದ ಸಂತ್ರಸ್ತೆ ಕಂಡಕ್ಟರ್ ಮೇಲೆ ದೂರು ಕೊಟ್ಟಿದ್ದಾರೆ. ಪೊಲೀಸರು ನಿರ್ವಾಹಕ ಮತ್ತು ಹಲ್ಲೆ ಮಾಡಿದ್ದ ಆರೋಪದ ಮೇಲೆ ಸಂತ್ರಸ್ತೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

Video Top Stories