ರಾಜ್ಯಗಳ ಗಡಿಮೀರಿ ಪ್ರೀತಿಸಿ ಮದುವೆಯಾದವರು, ಮೊದಲ ರಾತ್ರಿಗೂ ಮುನ್ನವೇ ಮಸಣ ಸೇರಿದರು!

ಕೋಲಾರದ ಯುವಕ ಹಾಗೂ ಆಂಧ್ರಪ್ರದೇಶದ ಯುವತಿ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿ ಮೊದಲ ರಾತ್ರಿಗೂ ಮುನ್ನವೇ ಮಸಣ ಸೇರಿದ್ದಾರೆ.

Share this Video
  • FB
  • Linkdin
  • Whatsapp

ಕೋಲಾರದ ಯುವಕ ಹಾಗೂ ಆಂಧ್ರಪ್ರದೇಶ ಯುವತಿ ಇಬ್ಬರೂ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಂಡಿದ್ದರು. ಬೆಳಗ್ಗೆ ಮದುವೆ ಮಾಡಿಕೊಂಡ ಜೋಡಿಗೆ, ಗುರು ಹಿರಿಯರೆಲ್ಲಾ ನಿಂತು ನೂರು ಕಾಲ ಒಟ್ಟಿಗೆ ಬಾಳಿ ಬದುಕಿ ಅಂತ ಹಾರೈಸಿದ್ದಾರೆ. ಆ ವಧು ವರ ಕೂಡ ಸಂತೋಷದಿಂದ ಸಪ್ತಪದಿ ತುಳಿದಿದ್ದರು. ಆದರೆ, ಮದುವೆಯಾಗಿ ಕೆಲವು ಗಂಟೆಗಳ ನಂತರ ಮನೆಯಲ್ಲಿ ಇಬ್ಬರಿಗೂ ಮೊದಲ ರಾತ್ರಿ ಮಾಡಿಸಲು ಸಿದ್ಧತೆ ಮಾಡಲಾಗುತ್ತಿತ್ತು. ಇಬ್ಬರೂ ಜೋಡಿ ಮನೆಯವರಿಂದ ಪ್ರೇವೇಟ್ ಆಗಿ ಹೋಗಿ ಮಾತಾಡಬೇಕು ಅಂತ ಮನೆಯ ಕೋಣೆಯೊಳಗೆ ಸೇರಿಕೊಂಡಿದ್ದಾರೆ. ಆದರೆ, ಎಷ್ಟೇ ಹೊತ್ತು ಕಳೆದರೂ ಇಬ್ಬರೂ ಕೋಣೆಯಿಂದ ಹೊರಗೆ ಬರಲಿಲ್ಲ.

ಮದುವೆಯಾದ ನಂತರ ಸಂಜೆ ವೇಳೆ ಮಾತನಾಡಲು ಕೋಣೆಯೊಳಗೆ ಹೋದ ಜೋಡಿ ಹೊರಗೆ ಬಾರದ ಹಿನ್ನೆಲೆಯಲ್ಲಿ ಮನರಯವರು ಅಲ್ಲಿಗೆ ಹಗಿದ್ದಾರೆ. ಆದರೆ, ಕೋಣೆಯೊಳಗೆ ಗಾಯಗೊಂಡು ನರಳಾಡುವ ಶಬ್ದ ಕೇಳಿದೆ. ಇದೇನಿದು ಎಂದು ರೂಮಿನೊಳಗೆ ಹೋಗಿ ನೋಡಿದರೆ ಇಬ್ಬರೂ ನವದಂಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇನ್ನು ಕೂಡಲೇ ತರಾತುರಿಯಲ್ಲಿ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆ ತಲುಪುವಷ್ಟರಲ್ಲಿಯೇ ವಧು ಸಾವನ್ನಪ್ಪಿದ್ದಾಳೆ. ಇನ್ನು ವರನಿಗೆ ಒಂದು ದಿನ ಚಿಕಿತ್ಸೆ ನೀಡಿದರೂ ಗಂಭೀರ ಗಾಯಗೊಂಡಿದ್ದರಿಂದ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ. ಆದರೆ, ಇಬ್ಬರೂ ಕೋಣೆಯಲ್ಲಿದ್ದಾಗ ತಮಗೆ ತಾವೇ ಹರಿತವಾದ ಆಯುಧಗಳಿಂದ ಕೊಯ್ದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Related Video