ಪತ್ನಿ ಅಕ್ರಮ ಸಂಬಂಧ; ನಡುಬೀದೀಲಿ ಕಾರವಾರ ಮೂಲದ ಪುಣೆ ಉದ್ಯಮಿ ಕೊಲೆ

ಕಾರವಾರ ಮೂಲದ ಪುಣೆ ಉದ್ಯಮಿಯ ಬರ್ಬರ ಹತ್ಯೆಯಾಗಿದೆ. ಈ ಹತ್ಯೆಯ ತನಿಖೆ ಆರಂಭಿಸಿದ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ವರದಿಯಾಗಿದೆ

Share this Video
  • FB
  • Linkdin
  • Whatsapp

ಆತ ಪುಣೆಯ ಬಿಗ್ ಬ್ಯುಸಿನೆಸ್ ಮ್ಯಾನ್. ಎಲೆಕ್ಟ್ರಾನಿಕ್ಸ್ ಹಾಗೂ ಮೆಡಿಕಲ್ ಉತ್ಪನ್ನಗಳ ಆಮದು-ರಫ್ತು ಉದ್ಯಮ ಹೊಂದಿದ್ದ. ಆತ ನಮ್ಮ ಕಾರವಾರದವರು. ಲಕ್ಷ ಲಕ್ಷ ವ್ಯವಹಾರ ಮಾಡ್ತಿದ್ರೂ ಆತ ತನ್ನ ಮೂಲವನ್ನ ಮರೆತಿರಲಿಲ್ಲ. ಪ್ರತೀ ವರ್ಷ ಜಾತ್ರೆ ಸಮಯಕ್ಕೆ ಸರಿಯಾಗಿ ತನ್ನೂರಿಗೆ ಕುಟುಂಬ ಸಮೇತ ಬಂದುಬಿಡ್ತಿದ್ದ. ಅದೇ ರೀತಿ ಈ ವರ್ಷ ಕೂಡ ಆತ ತನ್ನೂರಿಗೆ ಬಂದಿದ್ದ. ಆದ್ರೆ ಮತ್ತೆ ವಾಪಸ್ ಹೋಗಲಿಲ್ಲ.

ಆತನನ್ನ ತನ್ನ ಮನೆಯ ಎದುರಲ್ಲೇ ಬರ್ಬರವಾಗಿ ಕೊಂದು ಮುಗಿಸಿದ್ರು. ಇನ್ನೂ ಗಂಡನ ಕೊಲೆಯನ್ನ ತಡೆಯಲು ಬಂದ ಆತನ ಹೆಂಡತಿ ಮೇಲೂ ಹಂತಕರು ಹಲ್ಲೆ ಮಾಡಿ ಎಸ್ಕೇಪ್ ಆಗಿದ್ರು. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರ ಪ್ರತೀ ಹೆಜ್ಜೆ ಕೂಡ ರೋಚಕವಾಗಿತ್ತು. ಹಾಗಾದ್ರೆ ಪುಣೆ ಬ್ಯುಸಿನೆಸ್ಮ್ಯಾನ್ ಕೊಲೆಯ ಹಿಂದಿನ ರಹಸ್ಯವೆನು? ಆತನನ್ನ ಮರ್ಡರ್ ಮಾಡಿದ್ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್‌

Related Video