ಪೊಲೀಸರ ಕೈಸೇರಿದ ಡಯಾಟಮ್ ವರದಿ: ಚಂದ್ರು ಅವರದ್ದು ಸಹಜ ಸಾವು..?
ಎಫ್‌ಎಸ್‌ಎಲ್, ಮರಣೋತ್ತರ ಪರೀಕ್ಷಾ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ಚಂದ್ರು ಸಾವಿನ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಸರ್ಕಾರ ಈ ಪ್ರಕರಣಕ್ಕೆ ತುಂಬಾ ಮಹತ್ವ ಕೊಟ್ಟಿದೆ ಎಂದು ರಾಜ್ಯ ಗೃಹ ಸಚಿವ ಹೇಳಿದ್ದಾರೆ.
ಹೊನ್ನಾಳಿಯ ಬಿಜೆಪಿ ಶಾಸಕ ಸೋದರನ ಪುತ್ರನ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಯಾಟಮ್ ವರದಿ ಪೊಲೀಸರ ಕೈ ಸೇರಿದೆ. ಶ್ವಾಸಕೋಶದಲ್ಲಿ ನೀರು ಇರುವುದನ್ನು ಈ ವರದಿ ಖಚಿತಪಡಿಸಿದೆ. ಈ ಹಿನ್ನೆಲೆ ಚಂದ್ರಶೇಖರ್ ಬದುಕಿದ್ದಾಗಲೇ ನಾಲೆಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಡಯಾಟಮ್ ಪರೀಕ್ಷಾ ವರದಿ ಸಹಜ ಸಾವು ಎಂದು ಹೇಳುತ್ತಿದೆ. ಎಫ್‌ಎಸ್‌ಎಲ್, ಮರಣೋತ್ತರ ಪರೀಕ್ಷಾ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ಇನ್ನು, ಚಂದ್ರು ಸಾವಿನ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ಪಡೆದಿದ್ದಾರೆ ಎಂದೂ ತಿಳಿದುಬಂದಿದೆ. ರಾಜ್ಯ ಬಿಜೆಪಿ ಸರ್ಕಾರ ಈ ಪ್ರಕರಣಕ್ಕೆ ತುಂಬಾ ಮಹತ್ವ ಕೊಟ್ಟಿದೆ ಎಂದು ರಾಜ್ಯ ಗೃಹ ಸಚಿವ ಹೇಳಿದ್ದಾರೆ.